ಪ್ರಲ್ಹಾದ ಜೋಶಿ ಬದಲಾಯಿಸಿ ಅಭಿಯಾನಕ್ಕೆ ಬಲ: ಶ್ರೀ ದಿಂಗಾಲೇಶ್ವರ ಶ್ರೀಗಳ ಬೆಂಬಲಕ್ಕೆ ನಿಂತ ಧಾರವಾಡ ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

admin Avatar

ಧಾರವಾಡ: ಧಾರವಾಡದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮುಖಂಡರು‌ ಸುದ್ದಿಗೋಷ್ಠಿ ನಡೆಸಿ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಲಿಂಗಾಯತ ಭವನದಲ್ಲಿ‌ ವೀರಶೈವ ಮಹಾಸಭಾದ ಮುಖಂಡರಾದ ಈಶ್ವರ ಚಂದ್ರ ಹೊಸಮನಿ, ವೀರಣ್ಣ ಎಳಲ್ಲಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.
ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಮೂಹವೇ ಇದೆ. ಜಿಲ್ಲೆಯಲ್ಲಿ 6 ಲಕ್ಷ ಜನಸಂಖ್ಯೆ ಇದೆ, 25 ವರ್ಷಗಳಿಂದ ಸಮಾಜಮುಖಿ‌ ಕೆಲಸ ಮಾಡಿದರೂ ಏನು ಅಭಿವೃದ್ಧಿ ಆಗಿಲ್ಲ. ನಾವು ಮಹಾಸಭೆಯನ್ನ ಹುಟ್ಟು ಹಾಕಿದ್ದೇವೆ, ನಾವು ರಾಜ್ಯದಲ್ಲಿ 45 ರಷ್ಟು ಜನಸಂಖ್ಯೆ ಇದ್ದೇವೆ.‌ ಸಂಸದ ಸ್ಥಾನಕ್ಕೆ ಲಿಂಗಾಯತ ವ್ಯಕ್ತಿ ಗುರುತಿಸಿಲ್ಲ.‌ ಸಮಾಜದ ಒಂದು ಕಳಕಳಿ ಏನೆಂದರೆ, ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಡಲಾಗಿದೆ. ದಿಂಗಾಲೇಶ್ವರ ಶ್ರೀಗಳು ಮಠಾಧೀಶರ ಜೊತೆ ಮಾದ್ಯಮಗೊಷ್ಠಿ ನಡೆಸಿದ್ದಾರೆ.‌ ಅದರ ಪೂರಕವಾಗಿ ನಾವು ಬೆಂಬಲಕ್ಕೆ ನಿಲ್ಲುತಿದ್ದು, ಸ್ವಾಮೀಜಿ ಧ್ವನಿಗೆ ಧ್ವನಿ ಗೂಡಿಸುತ್ತಿದ್ದೇವೆ ಎಂದರು.
ನಮಗೆ ಲಿಂಗಾಯತ ಅಭ್ಯರ್ಥಿ ಬೇಕು, ನಾವು ಪಕ್ಷ ಎಂದು ಹೋಗುತ್ತಿಲ್ಲ. ಅಭಿವೃದ್ಧಿಗಾಗಿ ನಾವು ಮಾಡುತಿದ್ದೇವೆ, ಬಿಜೆಪಿಗೆ ನಾವು ಕೂಡ ಒತ್ತಾಯ ಮಾಡುತ್ತೇವೆ‌ ಎಂದರು.
ಜೋಶಿ ಅವರಿಗೆ ಟಿಕೆಟ್ ಕೊಟ್ಟಿದ್ದನ್ನು ವಿರೋಧ ಮಾಡುತ್ತೇವೆ. 31 ಕ್ಕೆ ನಾವು ತೀರ್ಮಾನ ಮಾಡುತ್ತೇಎ, ಸ್ವಾಮೀಜಿಗಳು ತೆಗೆದುಕೊಳ್ಳುವ ತಿರ್ಮಾನಕ್ಕೆ ಬದ್ಧ.‌ ಇಡೀ ಲಿಂಗಾಯತ ಸಮುದಾಯ ದಿಂಗಾಲೇಶ್ವರರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.
ನಮ್ಮ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳಿಂದ ಬೆಂಬೆಲ ನೀಡುತ್ತೇವೆ. ಇದು ನಮ್ಮ ಸಮಾಜದ ಧ್ವನಿ, ನಮ್ಮ ಸಮಾಜ ತುಳಿತಕ್ಕೆ ಒಳಗಾಗುತ್ತಿದೆ. ಪ್ರಮುಖ ಘಟ್ಟ ಎಂದರೆ ಕೆಲಸ, ಆ ಕೆಲಸ ಆಗಬೇಕಾದರೆ ಅಭಿವೃದ್ಧಿ ಆಗಬೇಕು.‌ಆದರೆ ಅದು ಆಗಲಿಲ್ಲ ಕೆಲಸನೇ ಆಗಿಲ್ಲ. ನಮ್ಮ ಅಭ್ಯರ್ಥಿ ಆದರೆ ಸಮಾಜ ಕಟ್ಟಿ ಅಭಿವೃದ್ಧಿ ಮಾಡಬಹುದು, ಇದು ನಮ್ಮ ಕಳಕಳಿ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ತೆಗೆದುಕೊಳ್ಳುವ ತಿರ್ಮಾನಕ್ಕೆ ನಾವು ಬದ್ಧ. ನಮಗೆ ಕಣ್ಣು ತೆರೆಸುವ ಕೆಲಸ ಸ್ವಾಮೀಜಿ ಮಾಡಿದ್ದಾರೆ.‌ ಎಲ್ಲ‌ ಸ್ವಾಮೀಜಿಗಳು ಮಠ ಬಿಟ್ಟು ಹೊರ ಬಂದಿದ್ದಾರೆ. ಅವರು ತೋರಿಸಿದ ದಾರಿಯಲ್ಲಿ ಹೋಗುತ್ತೇವೆ.‌ ನಮಗೆ ಎಲ್ಲ ಬೆನಿಫಿಟ್ ಸಿಗಲೆಂದು ನಾವು ಇದನ್ನು ಮಾಡುತಿದ್ದೇವೆ.‌ ಸ್ವಾಮೀಜಿಯವರ ಮಾತಿಗೆ ನಾವೆಲ್ಲ ಬದ್ಧ. ಸ್ವಾಮೀಜಿ ಮಾತಿಗೆ, ಎಲ್ಲದಕ್ಕೂ ಬೆಂಬಲ ಕೊಡುತ್ತೇವೆ ಎಂದು ಲಿಂಗಾಯತ ಮುಖಂಡರ ತಿಳಿಸಿದರು

Leave a Reply

Your email address will not be published. Required fields are marked *