ಬಾಗಲಕೋಟೆ : ಸಂರಕ್ಷಣೆಗೆ ಆಯ್ಕೆ ಮಾಡಲಾದ 60 ಸ್ಮಾರಕಗಳ ಸಂರಕ್ಷಣೆಗೆ ಡಿಸೆಂಬರ್ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದಡಿ ಪ್ರವಾಸೋದ್ಯಮ ತಾಣ ಐಹೊಳೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯಿಂದ ಅರ್ಧದಷ್ಟು ಸ್ಮಾರಕಗಳ ಸಂರಕ್ಷಣೆಗೆ ತೆಗೆದುಕೊಂಡಿದ್ದು, ರಾಜ್ಯಕ್ಕೆ ಸಂಬಂಧಿಸಿದ 61 ಸ್ಮಾರಕಗಳ ಪೈಕಿ ಈಗಾಗಲೇ ಒಂದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 60 ಸ್ಮಾರಕ ಸಂರಕ್ಷಣೆಗೆ ಡಿಸೆಂಬರ್ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ತಿಳಿಸಿದರು.
ಐಹೊಳೆ ಪ್ರವಾಸಿ ತಾಣಗಳಲ್ಲಿ ಬಹಳಷ್ಟು ದಿನಗಳಿಂದ ಸ್ಮಾರಕಗಳಲ್ಲಿ ಕುಟುಂಬಗಳು ವಾಸವಾಗಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಉಪಯೋಗಿಸಿಕೊಂಡಿದ್ದು, ಬೇರೆಡೆ ನಿವೇಶನ ನೀಡಿದಲ್ಲಿ ಸ್ಥಳಾಂತವಾಗಲು ಎಲ್ಲ ರೀತಿಯ ಸಹಕಾರ ಸಹ ನೀಡುತ್ತಿದ್ದಾರೆ. ಸ್ಮಾರಕಗಳಲ್ಲಿ ವಾಸವಾಗಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಅವುಗಳನ್ನು ಅಭಿವೃದ್ದಿಪಡಿಸಲು ಸರಕಾರ ತಿರ್ಮಾನಿಸಿದೆ. ಬರುವ ಜನವರಿ ಅಂತ್ಯದೊಳಗಾಗಿ ಐಹೊಳೆ ಗ್ರಾಮದ 124 ಕುಟುಂಬಗಳಿಗೆ ನಿವೇಶನ ನೀಡಲು ಭೂಮಿ ಖರೀದಿ ಕಾರ್ಯ ನಡೆಯಲಿದೆ ಎಂದರು.
- ಸ್ಮಾರಕಗಳ ಸಂರಕ್ಷಣೆಗೆ ದತ್ತು ಯೋಜನೆ ಕರ್ನಾಟಕದ ಕಲೆ, ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಮೂಲಕ ಬೀದರ ಜಿಲ್ಲೆಯಿಂದ ರಾಜ್ಯದ ಪ್ರವಾಸವನ್ನು ಪ್ರಾರಂಭಿಸಲಾಗಿದೆ. ರಾಜ್ಯಾದ್ಯಂತ 280 ಸಂರಕ್ಷಿತ ಸ್ಮಾರಕಗಳನ್ನು ದತ್ತು ಯೋಜನೆಗೆ ಒಳಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಮಾರಕಗಳನ್ನು ದತ್ತು ಯೋಜನೆಗೆ ನೀಡಲಾಗುತ್ತಿದೆ. ಐಹೊಳೆಯಲ್ಲಿರುವ ಕೆಲವೊಂದು ಸ್ಮಾರಕಗಳ ಸಂರಕ್ಷಣೆಗೆ ದತ್ತು ಪಡೆಯಲು ಆಸಕ್ತರು ಮುಂದೆ ಬಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಪ್ರಶಾಂತ ಮನೋಹರ, ಭಾರತೀಯ ಪುರಾತತ್ವ ಇಲಾಖೆಯ ದೇವರಾಜ, ಪ್ರಮೋದ, ಪ್ರಶಾಂತ ಕುಲಕರ್ಣಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ಮಾಜಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.
- ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವನ್ನೇ ಮಾರಾಟಕ್ಕಿಟ್ಟ ಪಂಚಾಯಿತಿ ಬಿಲ್ ಕಲೆಕ್ಟರ್…ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಭೂಪ…!!!
- ಆದಾಯ ಮೀರಿದ ಆಸ್ತಿ ಹೊಂದಿದ ಕೇಸ್… ಡಿಸಿಎಂ ಡಿಕೆಶಿ ಸಿಬಿಐ ಕೇಸ್ ವಾಪಸ್ ಗೆ ನಿರ್ಧರಿಸಿದ ಸರ್ಕಾರದ ಕ್ರಮ ವಿರೋಧಿಸಿ… ನ್ಯಾಯಾಲಯದ ಮೆಟ್ಟಿಲೇರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ
- ಮುಂಗಾರುಮಳೆ ಬೆಡಗಿಗೆ ಕೂಡಿ ಬಂದ ಕಂಕಣ… ಪೂಜಾ ಗಾಂಧಿ ಮದುವೆ ಆಗುವ ಹುಡುಗ ಯಾರು ಗೊತ್ತೆ….!
- ಗದಗ ನಗರದಲ್ಲಿನ 22 ಗುಂಟೆ ನಿವೇಶನ ಹಕೀಕತ್… ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಗೆ ಕೊಡಿ ಎಂದು ಸಿಎಂ ಆದೇಶ, ಚನ್ನಮ್ಮ ಸಮುದಾಯ ಭವನಕ್ಕೆ ನೀಡಲು ಸಚಿವ ಎಚ್ ಕೆ ಪಾಟೀಲ ಆಸಕ್ತಿ…????
- ಗದಗ-ಬೆಟಗೇರಿ ಅವಳಿ ನಗರದಲ್ಲಿ (ಥರ್ಡ್ ಐ) ಮೂರನೇ ಕಣ್ಣು ಕಟ್ಟೆಚ್ಚರ….ಸಂಚಾರಿ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೆ ಬರುತ್ತೆ ದಂಡದ ನೋಟಿಸ್… ಎಸ್ಪಿ ಬಿ ಎಸ್ ನೇಮಗೌಡರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ…