ಕಾಂಗ್ರೆಸ್ ಗೆ ರೈತರೆಂದರೆ ಅಲರ್ಜಿ: ಬಸವರಾಜ ಬೊಮ್ಮಾಯಿ
ಹಾವೇರಿ: (ರಟ್ಟಿಹಳ್ಳಿ) ರೈತರನ್ನು ಎದುರು ಹಾಕಿಕೊಳ್ಳುವ ಯಾವುದೇ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಈ ಸರ್ಕಾರ ರೈತರನ್ನು ವಿರೋಧ ಹಾಕಿಕೊಂಡಿದೆ. ಈ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದರು
ಹಿರೆಕೆರೂರು ವಿಧಾನಸಭಾ ಕ್ಷೇತ್ರದ ರಟ್ಟಿಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ಈ ರಾಜ್ಯದಲ್ಲಿ ಬಹಳ ಜನ ಕೃಷಿ ಸಚಿವರು ಬಂದು ಹೋಗಿದ್ದಾರೆ. ಯಾರು ಕೃಷಿ ಸಚಿವರು ಅಂತ ಗೊತ್ತೇ ಇರಲಿಲ್ಲ. ಬಿ.ಸಿ ಪಾಟೀಲ್ ಕೃಷೊ ಸಚಿವರಾದ ಮೇಲೆ ಹೊಸ ಆಯಾಮ ತಂದರು. ನಮ್ಮ ಕೃಷಿ ಉತ್ಪಾದನೆ ಹೆಚ್ಚಾಯಿತು. ಬೀಜ ಉತ್ಪಾದನೆ ಹೆಚ್ಚಾಯಿತು. ನಮ್ಮ ಕೃಷಿ ಉತ್ಪಾದನೆ ವಿದೇಶಕ್ಕೆ ರಪ್ತಾಯಿತು. ಸಿರಿ ಧಾನ್ಯ ಬೆಳೆಯುವ ರೈತರಿಗೆ ಹತ್ತು ಸಾವಿರ ರೂ. ಪ್ರೋತ್ಸಾಹ ನೀಡಿದರು. ರೈತರ ಬಗ್ಗೆ ಕಾಳಜಿ ಇರುವವರು ಮಾತ್ರ ರೈತರ ಕೆಲಸ ಮಾಡುತ್ತಾರೆ ಎಂದರು.
ಕಳೆದ ಹತ್ತು ತಿಂಗಳಲ್ಲಿ ಹಿರೆಕೆರೂರು ತಾಲೂಕಿನಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಆಫಿಸ್ ಕಸಾ ಗೂಡಿಸಲು ಈ ಸರ್ಕಾರದ ಬಳಿ ಹಣ ಇಲ್ಲ. ರೈತರ ಹಾಲು ಉತ್ಪಾದಕರಿಗೆ ಬಾಕಿ ಕೊಟ್ಟಿಲ್ಲ. ರೈತರೆಂದರೆ ಈ ಸರ್ಕಾರಕ್ಕೆ ಅಲರ್ಜಿ. ಇದು ರೈತರ ವಿರೋಧಿ ದರಿದ್ರ ಸರ್ಕಾರ ಇದನ್ನು ತೊಲಿಗಿಸಬೇಕು ಎಂದರು.
ಕಳೆದ ಹತ್ತು ತಿಂಗಳಲ್ಲಿ ಹಿರೆಕೆರೂರು ತಾಲೂಕಿನ ಭಾಗ್ಯದ ಬಾಗಿಲು ಮುಚ್ಚಿದೆ. ಲೋಕಸಭೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆದ್ದರೆ ಮತ್ತೆ ವಿಧಾನಸಭೆ ಚುನಾವಣೆ ನಡೆಯುತ್ತದೆ. ಬಿ.ಸಿ.ಪಾಟೀಲರು ಮತ್ತೆ ಶಾಸಕರಾಗಿ ಮಂತ್ರಿ ಆಗುತ್ತಾರೆ ಎಂದರು.
ರಾಹುಲ್ ಗಾಂಧಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿ ಮಕ್ಕಳಿಗೆ ಬರಬೇಕಾದರೆ ಸರ್ಕಾರಕ್ಕೆ ಶೇ 55% ರಷ್ಟು ಆಸ್ತಿ ಸರ್ಕಾರಕ್ಕೆ ಕೊಡಬೇಕಂತೆ. ರಾಹುಲ್ ಗಾಂಧಿಗೆ ರಾತ್ರಿ ಕನಸು ಬಿದ್ದರೆ ಅದನ್ನು ಬೆಳಿಗ್ಗೆ ಬಂದು ಹೇಳುತ್ತಾರೆ. ಇಂತ ನಾಯಕರು ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತಹಾಕಿ ಎಂದು ಮನವಿ ಮಾಡಿದರು.
ರೋಡ್ ಶೋ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಹಾಜರಿದ್ದರು.
Leave a Reply