ಕಾಂಗ್ರೆಸ್ ಅಂದರೆ ಡೇಂಜರ್ ಹುಷಾರಾಗಿರಿ: ಬಸವರಾಜ ಬೊಮ್ಮಾಯಿ

admin Avatar

ಪಿತ್ರಾರ್ಜಿತ ಆಸ್ತಿಯಲ್ಲಿ ತೆರಿಗೆ ಪಾಲು ಕಾನೂನು ಜಾರಿಯಾದರೆ ಕ್ರಾಂತಿಯಾಗುತ್ತದೆ: ಬಸಬರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್ ಅಂದರೆ ಡೇಂಜರ್, ಹುಷಾರಾಗಿರಿ, ಅವರು ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ 55% ರಷ್ಟು ತೆರಿಗೆ ಕಟ್ಟುವ ಕಾನೂನು ತರಲಿದ್ದಾರೆ, ಆ ರೀತಿಯ ಕಾನೂನು ತಂದರೆ ಕ್ರಾಂತಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಹಂಸಭಾವಿ, ಕೋಡ ಗ್ರಾಮಗಳಲ್ಲಿ ರೋಡ್ ಶೋ ಮಾಡಿ ಮಾತನಾಡಿದರು.
ಹಿರೆಕೆರೂರು ತಾಲೂಕಿನಲ್ಲಿ ಗುಡ್ಡದ ಮಲ್ಲಾಪುರ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದವರು ನಾವು. ಆದರೆ, ಈಗ ಆರಿಸಿ ಬಂದವರು ಚುನಾವಣೆ ಮುಗಿಯುವ‌ ಮುನ್ನವೇ ಜನಪ್ರಿಯ ಶಾಸಕರು ಎಂದು ಬಿರುದು ಪಡೆಯುತ್ತಾರೆ. ನಮಗೆ ಜನಪ್ರಿಯ ಶಾಸಕರು ಬೇಕಿಲ್ಲ. ಜನೋಪಯೋಗಿ ಶಾಸಕರು ಬೇಕು. ಬಿಜೆಪಿ ಜನೋಪಯೋಗಿ ಪಕ್ಷ, ಬಿಜೆಪಿ ಶಾಸಕರು ಜನೋಪಯೋಗಿ ಶಾಕಸರು ಇದ್ದಾರೆ‌ ಎಂದರು.
ಮೋದಿಯವರು ಇಡೀ ದೇಶವನ್ನು ಒಗ್ಗೂಡಿಸಿ ದೇಶದಲ್ಲಿ ಭಯೋತ್ಪಾದನೆ ಹೊಡೆದೋಡಿಸಿ, ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ. ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದು ಅಸಾಧ್ಯ ಎಂದು ಎಲ್ಲರೂ ಹೇಳಿದರು. ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡಿದರು. ಕೊವಿಡ್ ಸಮಯದಲ್ಲಿ 130 ಕೋಟಿ ಜನರಿಗೆ ಉಚಿತ ಲಿಸಿಕೆ ಕೊಟ್ಟು ಜೀವ ಉಳಿಸಿದರು. ಕಾಂಗ್ರೆಸ್ ನವರು ಮೋದಿಯವರ ಲಸಿಕೆ ತೆಗೆದುಕೊಳ್ಳಬೇಡಿ, ಮಕ್ಕಳಲಾಗುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ನವರು ಹಸಿ ಸುಳ್ಳು ಗಳನ್ನು ಹೇಳುತ್ತಾರೆ.
ನಾವು ರೈತ ವಿದ್ಯಾನಿಧಿ ಯೋಜನೆ ತಂದೆವು ಅದನ್ನು ನಿಲ್ಲಿಸಿದ್ದಾರೆ. ರೈತ ಶಕ್ತಿ ಯೋಜನೆ ನಿಲ್ಲಿಸಿದ್ದಾರೆ. ಬರ ಬಂದಿದೆ ರೈತರಿಗೆ ರಾಜ್ಯ ಸರ್ಕಾರದ ಖಜಾನೆಗಿಂದ ಒಂದು ಪೈಸೆ‌ ಕೊಟ್ಟಿಲ್ಲ. ಇದು ರೈತ ವಿರೋಧಿ ದರಿದ್ರ ಸರ್ಕಾರ.
ಮೋದಿಯವರು ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟರು. ಈಗ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ತಮ್ಮ ಅಕ್ಕಿ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ತ್ಯಾಗ ಮಾಡಿದ ಬಿಸಿಪಿ
ಮಾಜಿ ಸಚಿವ ಬಿಸಿ ಪಾಟಿಲರು ಅಧಿಕಾರ ತ್ಯಾಗ ಮಾಡಿ, ಮತ್ತೆ ಚುನಾವಣೆ ಮಾಡಿ ಗೆದ್ದು ಬಂದು ಹಿರೆಕೆರೂರು ತಾಲೂಕು ಅಭಿವೃದ್ಧಿ ಮಾಡಿದ್ದಾರೆ. ಇರುವ ಅಧಿಕಾರವನ್ನು ಗ್ರಾಮ ಪಂಚಾಯತಿ ಸದಸ್ಯರೂ ಬಿಡುವುದಿಲ್ಲ. ಆದರೆ, ಬಿಸಿ ಪಾಟೀಲರು ಕ್ಷೇತ್ರದ ಅಭಿವೃದ್ಧಿ ಗೆ ಅಧಿಕಾರ ತ್ಯಾಗ ಮಾಡಿ ಚುನಾವಣೆಯಲ್ಲಿ ನಿಂತು ಬಂದರು. ಎರಡು ಸಾವಿರ ಕೋಟಿ ರೂ ತಂದು ಕ್ಷೇತ್ರದ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಮತ್ತೆ ವಿಧಾಮಸಭೆ ಚುನಾವಣೆ ನಡೆಯಲಿದೆ. ಆಗ ಬಿಸಿ‌ ಪಾಟೀಲರು ಮತ್ತೆ ಶಾಸಕರಾಗಿ ಆಯ್ಕೆ ಬರುತ್ತಾರೆ. ಇದು ನನ್ನ ಭವಿಷ್ಯ ಎಂದು ಹೇಳಿದರು.
ಬಿ.ಸಿ ಪಾಟೀಲರು ಸೋತಿರಬಹುದು ಆದರೆ, ಜನರ ಮನಸಿನಲ್ಲಿ ಶಾಸ್ವತವಾಗಿ ಸ್ಥಾನ ಪಡೆದಿದ್ದಾರೆ ಎಂದರು.
ಪ್ರಚಾರದ ಸಂದರ್ಭದಲ್ಲಿ ಮಾಜಿ ಸಚಿವ ಬಿ‌.ಸಿ.ಪಾಟೀಲ್ ಜೊತೆಯಲಿದ್ದರು.

Leave a Reply

Your email address will not be published. Required fields are marked *