ಭಯೋತ್ಪಾದಕರಿಗೆ ಭಯ ಹುಟ್ಟಿಸಿದವರು ನರೇಂದ್ರ ಮೋದಿಯವರು: ಬಸವರಾಜ ಬೊಮ್ಮಾಯಿ

admin Avatar

ಅಸಾಧ್ಯವನ್ನು ಸಾಧ್ಯ ಮಾಡಿದವರು ನರೇಂದ್ರ ಮೋದಿಯವರು: ಬಸವರಾಜ ಬೊಮ್ಮಾಯಿ

ದಾವಣಗೆರೆ: ಭಾರತದಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ಭಯೋತ್ಪಾದನಾ ಮುಕ್ತ ದೇಶ ಮಾಡಿ, ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶ ಕಂಡಂತ ಅಪ್ರತಿಮ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಲಾಲಬಹದ್ದೂರ ಶಾಸ್ತ್ರಿ ಅವರ ನಂತರ ದೇಶ ಕಂಡ ಪ್ರಧಾನ ಮಂತ್ರಿಗಳಲ್ಲಿ ಅಪ್ಪಟ ದೇಶ ಭಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇವರು 18 ಗಂಟೆ ಕೆಲಸ ಮಾಡುತ್ತಾರೆ. ತಮ್ಮ ನೂರು ವರ್ಷದ ತಾಯಿ ತೀರಿ ಹೋದಾಗ ಕೇವಲ ನೂರು ಗಂಟೆಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಿ, ಮತ್ತೆ ದೇಶ ಸೇವೆಗೆ ತೊಡಗಿಸಿಕೊಂಡಿದ್ದಾರೆ. ಈ ದೇಶದ ನೂರಾ ಮೂವತ್ತು ಕೋಟಿ‌ ಜನರ. ಮನದಲ್ಲಿ ಮೋದಿ ಇದ್ದಾರೆ ಎಂದರು.
ಯಾವುದು ಅಸಾಧ್ಯವಿತ್ತೊ ಅದನ್ನು ಸಾಧ್ಯ ಮಾಡಿದವರು ನರೇಂದ್ರ ಮೋದಿಯವರು. ಯುಪಿಎ ಅವಧಿಯಲ್ಲಿ ನಮ್ಮದು ಭಯೋತ್ಪಾದಕರ ತಾಣ ಆಗಿತ್ತು‌. ಆದರೆ, ಭಯೋತ್ಲಾದಕರಿಗೆ ಭಯ ಹುಟ್ಟಿಸಿದವರು ನರೇಂದ್ರ ಮೋದಿ, ಇವರು ಭಯೋತ್ಪಾದಕರ ಅಡಗು ತಾಣಗಳಿಗೆ ಹೋಗಿ ಅವರನ್ನು ಹೊಡೆದುರುಳಿಸಿ ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದರು.
ಇಷ್ಟೊಂದು ಜನಸಂಖ್ಯೆ ಇರುವ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದು ಅಸಾಧ್ಹ ಎನ್ನುವ ಮಾತಿತ್ತು. ಆದರೆ, ಮೋದಿಯವರು ಹತ್ತು ವರ್ಷದಲ್ಲಿ 25 ಕೋಟಿ ಜನರನ್ಮು ಬಡತನದಿಂದ ಮೇಲೆ ತಂದಿದ್ದಾರೆ. ದೇಶದ ಪ್ರತಿ ಮನೆಗೂ ಕುಡಿಯುವ ನೀರು ಕೊಟ್ಟವರು ನರೇಂದ್ರ ಮೋದಿಯವರು ಎಂದು ಹೇಳಿದರು.
ರಾಜ್ಯದ ಬರ ಪರಿಹಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಭಟನೆ ಮಾಡುತ್ತಿದೆ. ಯುಪಿಎ ಅವಧಿಯಲ್ಲಿ 1900 ಕೋಟಿ ಬಂದಿತ್ತು ಮೋದಿಯವರ ಅವಧಿಯಲ್ಲಿ10 ಸಾವಿರ‌ ಕೋಟಿ ರೂ. ಬರ ಪರಿಹಾರ ನೀಡಿದ್ದಾರೆ. ಹತ್ತು ವರ್ಷದಲ್ಲಿ 6 ಸಾವಿರ ಕಿ.ಮಿ ರಾಷ್ಟ್ರೀಯ ಹೆದ್ದಾರಿ ಮಾಡಿದ್ದಾರೆ. ರಾಜ್ಯದ ಒಂದು ಕೋಟಿ ಕುಟುಂಬಗಳು ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ‌. ಮೊದಲು ಉಜ್ವಲ ಯೋಜನೆ ಇರಲಿಲ್ಲ. ಎಲ್ಲರ ಮನೆಗಳಿಗೆ ಉಜ್ವಲ ಗ್ಯಾಸ್ ನೀಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಿ ಜೀವ ಉಳಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಈಗ ಐದು ಕೆಜಿ ಉಚಿತವಾಗಿ ಕೊಡುತ್ತಿದ್ದಾರೆ. ಅನ್ನ, ನೀರು, ಲಸಿಕೆ ಕೊಟ್ಟು ಜೀವ ಉಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ಋಣ ತೀರಿಸಲು, ರಾಜ್ಯದಲ್ಲಿರುವ ದರಿದ್ರ ಕಾಂಗ್ರೆಸ್ ಭ್ರಷ್ಟ ಸರ್ಕಾರವನ್ನು ಕಿತ್ತು ಒಗೆಯಿರಿ, ನರೇಂದ್ರ ಮೋದಿಯವರ ಕೈ ಬಲಪಡಿಸಿ ಭಾರತವನ್ನು ಅತ್ಹಂತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಮೋದಿಯವರನ್ನು ಬೆಂಬಲಿಸಿ ಎಂದು ಮಾನವಿ ಮಾಡಿದರು.

Leave a Reply

Your email address will not be published. Required fields are marked *