ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತಿಗೆ ಮರಳಾಗಬೇಡಿ: ಪಿಎಂ ಮೋದಿ ಸುಳ್ಳಿನ‌ ಸರದಾರ: ಸಿಎಂ ಸಿದ್ದರಾಮಯ್ಯ

admin Avatar

ಹುಬ್ಬಳ್ಳಿ: ಕಳೆದ 10 ವರ್ಷ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಜಾತಿಗಳ ಮೇಲೆ‌, ಧರ್ಮದ ಮೇಲೆ ಭಾವನಾತ್ಮಕವಾಗಿ ಆಡಳಿತ ಮಾಡಿದ್ದಾರೆ. ಬರಿ ಸುಳ್ಳು ಹೇಳುವುದನ್ನು ಕಲಿತಿರುವ ಮೋದಿ ಅವರು ಅಭಿವೃದ್ಧಿ ಏನು ಮಾಡಿಲ್ಲ. ಈ ದೇಶದ ಭವಿಷ್ಯ ಮತ್ತೆ ನಿರ್ಮಾಣವಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, 2014 ರಲ್ಲಿ ಸುಳ್ಳು ಹೇಳಿ, ಕಪ್ಪು‌ಹಣ ವಾಪಸ ತರುತ್ತೇವೆ ಎಂದು ಹೇಳಿದ್ದ ಮೋದಿ ಅವರು ಹಣ ತಂದಿದಾರಾ? ಸುಳ್ಳುಗಾರರನ್ನು ನಂಬಬೇಡಿ ಎಂದರು.
ಮುಸ್ಲಿಮರ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ರದ್ದು ಮಾಡಿತು. ನಂತರ ಸುಪ್ರೀಂಕೋರ್ಟ್ ನಲ್ಲಿ ಅಫಡವಿಟ್ ಹಾಕಿ ಯಥಾಪ್ರಕಾರ‌ ಮುಂದುವರಿಸಿದೆ. ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ಒಳಮಿಸಲಾತಿಯನ್ನು ಕೊಡುವ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಿಯೇ ತೋರಿಸುತ್ತದೆ ಎಂದು ಸಿಎಂ ಹೇಳಿದರು.
ಈ ಭಾಗದ ಯುವಕ ಬಡವರ, ದೀನದಲಿತರ ಕಣ್ಮಣಿ ಹಾಗೂ ಯುವ ನಾಯಕನಾಗಿರುವ ವಿನೋದ ಅಸೂಟಿಯನ್ನು‌ ಲೋಕಸಭೆಗೆ ಆಯ್ಕೆ ‌ಮಾಡಿ‌ ಕಳುಹಿಸಿ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *