ದೇಶಕ್ಕೆ ಮೋದಿ, ಹಾವೇರಿ ಕ್ಷೇತ್ರಕ್ಕೆ ಬೊಮ್ಮಾಯಿ ಗ್ಯಾರಂಟಿ’ : ಅನಿಲ‌ ಮೆಣಸಿನಕಾಯಿ

admin Avatar

‘ಗದಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ’ ಅನಿಲ‌‌ ಮೆಣಸಿನಕಾಯಿ

ಗದಗ: ಗದಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಟ್ಟಿಕೊಂಡಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು. ದೇಶಕ್ಕೆ ಮೋದಿ ಆದರೆ ಹಾವೇರಿ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಎಂದು ಬಿಜೆಪಿ ಮುಖಂಡ ಅನಿಲ‌ ಮೆಣಸಿನಕಾಯಿ ಹೇಳಿದರು.
ನಗರದ 22 ಮತ್ತು 23 ವಾರ್ಡ್ ನಲ್ಲಿ ಆಯೋಜಿಸಿದ್ದ ಜನತಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದಗ ಬೆಟಗೇರಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯಗಳನ್ನು ಮಾಡಲಾಗುವುದು ಅಲ್ಲದೇ, ಯುವಕರಿಗೆ ಉದ್ಯೋಗ ನೀಡಲು ಭಾರತಮಾಲಾ ದಂತಹ ಯೋಜನೆಯನ್ನು ತರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮಾತು ತಪ್ಪುವವರಲ್ಲ. ನುಡಿದಂತೆ ನಡೆದವರು. ಹೀಗಾಗಿ ಅವರನ್ಮು ಗೆಲ್ಲಿಸಿ ಸಂಸತ್ ಗೆ ಕಳಿಸಿದರೆ ಹಾವೇರಿ ಕ್ಷೇತ್ರಕ್ಕೆ ಬಹಳ ಅನುಕೂಲ ಆಗಲಿದೆ ಎಂದರು.
ಸ್ಥಳೀಯ ಶಾಸಕರು ಏನನ್ನೂ ಮಾಡುತ್ತಿಲ್ಲ. ಎಸಿ ರೂಂಲ್ಲಿ ಹಾಯಾಗಿ ಕುಳಿತಿದ್ದಾರೆ. ಕುಡಿಯುವ ನೀರು‌ ಇಲ್ಲದಿದ್ರು ನೀವು ಕೇಳಲ್ಲ‌ ಏಕೆ?  ಶಾಸಕರು ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ಸಿಗರಿಂದ ಜಿಲ್ಲೆ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ಮಾಜಿ‌ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜನರ ನಾಡಿಮಿಡಿತ ಗೊತ್ತಿದೆ‌. ಉತ್ತಮ ಅಭಿವೃದ್ಧಿ ಕನಸು ಕಾಣುವಂತ ಸಕಾಲವಿದು. ಅಭಿವೃದ್ಧಿಗೆ ಮತ ನೀಡಬೇಕು ಎಂದರು.
ನಗರಸಭೆಗೆ 40 ಕೋಟಿ ರೂ ಕೊಟ್ಟರೂ ಶಾಸಕರು ನೀರಿನ ಪೈಪ್ ಲೈನ್ ರಿಪೇರಿಗೆ ಹಣ ಕೊಡಲಿಲ್ಲ. ಇಂಥ ಜನವಿರೋಧಿ ಶಾಸಕರು ನಮ್ಮಲ್ಲಿ ಇದ್ದಾರೆ. ಇವರಿಗೆ ಪಾಠ ಕಲಿಸಬೇಕು ಎಂದರಲ್ಲದೇ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬೊಮ್ಮಾಯಿ ಸಂಸದರಾದರೆ ಉತ್ತಮ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಕುಡಿಯುವ ನೀರು ಕೊಡುವುದು ಬೊಮ್ಮಾಯಿ ಗ್ಯಾರಂಟಿ. ಹೀಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಬೊಮ್ಮಾಯಿ ಸಿಎಂ ಆಗಿದ್ದಾಗ ಗದಗ ನಗರದ ರಿಂಗ್ ರಸ್ತೆ, ಸಿಂಗಟಾಲೂರು ಯೋಜನೆಗೆ ಹಣಕಾಸು ನೀಡಿದ್ದಾರೆ. ವ್ಯವಸ್ಥೆ ‌ಸರಿ ಮಾಡುವುದಾಗಿ ಬೊಮ್ಮಾಯಿ ಮಾತು ಕೊಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು‌ಕುರಡಗಿ, ವಿಪ ಸದಸ್ಯ‌ಎಸ್ ವಿ ಸಂಕನೂರ, ಎಂ ಎಂ ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಾರ್ಡ್ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು‌ ಸಂವಾದದಲ್ಲಿ ಚರ್ಚಿಸಲಾಯಿತು. ಕುಡಿಯುವ ನೀರು, ಒಳಚರಂಡಿ‌ ಸಮಸ್ಯೆ ಬಗೆಹರಿಸಬೇಕು, ಚರಂಡಿ ಸ್ವಚ್ಚತೆ ಮಾಡುತ್ತಿಲ್ಲ. ವಾರ್ಡ್ ನ ಸದಸ್ಯರು ಸಹ‌ಸ್ಯರು ಸಹ ಸ್ಪಂದಿಸುತ್ತಿಲ್ಲ ಎಂದು ಜನರು ಆರೋಪಿಸಿದರು. ಚರಂಡಿ‌ಸ್ವಚ್ಛಗೊಳಿಸಲು ಬರುತ್ತಿಲ್ಲ, ಇದಕ್ಕಾಗಿ‌ನಿತ್ಯ ಜಗಳ ಮಾಡಬೇಕಾಗಿದೆ ಎಂದು‌ ಮಹಿಳೆಯರು ತಮ್ಮ ಅಳಲು‌ ತೋಡಿಕೊಂಡರು.
ಕುಡಿಯುವ ನೀರು‌ನಿಯಮಿತವಾಗಿ ಪೂರೈಕೆ ಆಗುತ್ತಿಲ್ಲ ಇದರಿಂದ‌ ತೊಂದರೆಯಾಗಿದೆ.
ಕುಡಿಯುವ ನೀರು, ಸಾರಿಗೆ ಸಂಪರ್ಕ‌ ಇಲ್ಲ, ಚರಂಡಿ ಸ್ಗಚ್ಛತೆ ಮಾಡಬೇಕು, ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಆಗಬೇಕು,
ಕಾಂಗ್ರೆಸ್ ಮೆಂಬರ್ ಕೆಲಸ ಮಾಡ್ತಾ ಇಲ್ಲ, ಶಾಸಕರು ಹುಲಕೋಟಿ ಮಾತ್ರ, ಗದಗ ಬೆಟಗೇರಿಗೆ ಅಲ್ಲ, ಇಲ್ಲಿ ಏನು ಕೆಲಸ ಆಗಿದೆ ಹೇಳಿ ಎಂದು ಸುರೇಶ ಹೆಬಸೂರ ಪ್ರಶ್ನಿಸಿದರು.
ಅನಿಲ‌ ಅಬ್ಬಿಗೇರಿ,  ವಿಪ‌ಸದಸ್ಯ ಎಸ್‌ವಿ ಸಂಕನೂರ, ಕಾಂತಿಲಾಲ ಬನ್ಸಾಲಿ, ಎಂ ಎಂ ಹಿರೇಮಠ, ವಸಂತ ಪಡಗದ,  ಗಂಗಾಧರ ಮೇಲಗಿರಿ, ಸುರೇಶ‌ ಹೆಬಸೂರ, ಸಂತೋಷ ಮೇಲಗಿರಿ, ವಿಜಯ ಮುತ್ತಿನಪೆಂಡಿಮಠ, ಚಾಂದ್ ಕೊಟ್ಟೂರು, ಬಸವರಾಜ ಹಡಪದ,‌ಮಹಾಂತೇಶ ಮೆಣಸಗಿ,  ಈಶ್ವರ ಹಿರೇಮಠ, ರವಿ ಹೂಗಾರ, ಸುವರ್ಣಕ್ಕ, ವಿಜಯಲಕ್ಷ್ಮಿ ಮಾನ್ವಿ, ಚನ್ನಮ್ಮ‌ಹುಳಕಣ್ಣವರ, ಕುಮಾರ ಮಾರನಬಸರಿ, ಶ್ರೀಕಾಂತ ದೊಡ್ಡಮನಿ ಉಪಸ್ಥಿತರಿದ್ದರು.
ಉಡುಚಪ್ಪ ಹಳ್ಳಿಕೇರಿ ನಿರೂಪಿಸಿದರು.

Leave a Reply

Your email address will not be published. Required fields are marked *