ನೇಹಾ ಹಿರೇಮಠ ಲವ್ ಜಿಹಾದ್ ಗೆ ಬಲಿ, ಹೇಯ ಕೃತ್ಯಕ್ಕೆ ನಾಡೇ ಬೆಚ್ಚಿಬಿದ್ದಿದೆ: ಚಕ್ರವರ್ತಿ ಸೂಲಿಬೆಲೆ

admin Avatar

ಹುಬ್ಬಳ್ಲಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಹೇಯ ಕೃತ್ಯ. ಇದು ಲವ್ ಜಿಹಾದ್ ಪ್ರಕರಣಗಳಲ್ಲಿ ಒಂದು. ಈ ಪ್ರಕರಣದಿಂದ ಯುವತಿಯರು ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ನೇಹಾ ಕೊಲೆ ದೃಶ್ಯಗಳು ಬಹಳ ಭಯಾನಕವಾಗಿವೆ ಎಂದು ಹಿಂದೂ‌‌ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಹುಬ್ಬಳ್ಳಿಯಲ್ಲಿ ಕೊಲೆಯಾಗಿ ಹೋಗಿರುವ ನೇಹಾ ನಿರಂಜನ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವನ ಹೇಳಿದ‌ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ನೇಹಾ ಕೊಲೆ ಪ್ರಕರಣದಂತವುಗಳು ಅಂತ್ಯ ಆಗಬೇಕು.ಇಡೀ ನಾಡೇ ಬೆಚ್ಚಿಬಿದ್ದಿದೆ. ಅವರ ತಾಯಿ ತಂದೆ ಪಾಡು ಹೇಳಬಾರದು. ಹೆಣ್ಣು ಮಕ್ಕಳನ್ನು ಚುಡಾಯಿಸಿದರೇ ಎನ್ ಕೌಂಟರ್ ಮಾಡಬೇಕು. ನೇಹಾ ತಂದೆ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ ಎಂದರು.
ಸರಕಾರ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದೆ. ನೇಹಾ ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಆಗಬೇಕು. ಇದರ ಹಿಂದೆ ಇರುವ ಷಡ್ಯಂತ್ರ ಬಯಲಿಗೆಳೆಯಬೇಕು ಎಂದು ಆಗ್ರಹಿಸೊದರು.
ರಾಜ್ಯದಲ್ಲಿ ಹೆಣ್ಣು ಮಕ್ಕಳ‌ ಕೊಲೆ ಆಗ್ತಾ ಇದೆ. ಉತ್ತರ ಪ್ರದೇಶದ‌‌‌‌ ಮಾದರಿ ಕಾನೂನು ಜಾರಿಯಾಬೇಕು. ಹೆಣ್ಣು ಮಕ್ಕಳನ್ನ ಚುಡಾಯಿಸುವವರನ್ನ
ಎನ್ ಕೌಂಟರ್ ಮಾಡಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿದ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಗೃಹ ಸಚಿವರು‌ ಸಿಎಂ ಇದನ್ನ ಲವ್ ಜಿಹಾದ್ ಅಂತಾ ಒಪ್ಪಿ ಕೊಳ್ಳಬೇಕು.ಕೇಂದ್ರ ಸರಕಾರದ ಕಾನೂನು ಶೀಘ್ರವೇ ಪರಿಣಾಮಕಾರಿ ಆಗಬೇಕು ಎಂದರು

Leave a Reply

Your email address will not be published. Required fields are marked *