ಗದಗ:- ನಗರದ ಅಖಿಲ ಭಾರತ ಜಂಗಮ ಸೇವಾ ಸಮಿತಿ, ವೀರಶೈವ ಮಹಾಸಭಾ, ಪ್ರಜಾ ಪರಿವರ್ತನಾ ವೇದಿಕೆ, ಕ್ರಾಂತಿ ಸೇನೆಯ, ವೀರ ಮದಕರಿ ಸೇನೆ , ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘಟನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನೇಹಾ ಹಿರೇಮಠರನ್ನು ಹತ್ಯೆಗೈದ ಆರೋಪಿ ಫಯಾಜ್’ನನ್ನ ಗಲ್ಲಿಗೆ ಏರಿಸುವಂತೆ ಆಗ್ರಹಿಸಿ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಮುಳಗುಂದನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು ಪ್ರತಿಭಟನೆಯುದ್ಧಕ್ಕೂ ಆರೋಪಿಗೆ ಗಲ್ಲು ಶಿಕ್ಷೆ ನೀಡಿ ನ್ಯಾಯ ದೊರಕಿಸಿಕೊಡಿ ಎಂಬ ಘೋಷಣೆ ಕೇಳಿ ಬಂದವು.
ಈ ಸಂದರ್ಭದಲ್ಲಿ ಮಾತನಾಡಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಕೋರ್ಲಹಳ್ಳಿ, ಯಾವುದೇ ಸಮಾಜದ ಹೆಣ್ಣುಮಕ್ಕಳಿಗೂ ಈ ರೀತಿ ಅನ್ಯಾಯವಾಗಬಾರದು ಕಾರಣ ದೇಶದ ಕಾನೂನು ಬಿಗಿಯಾಗಬೇಕು ಎಂದರು.
ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಜಂಗಮ ಸಮಾಜದ ಮುಖಂಡ ವಿ.ಕೆ ಗುರುಮಠ ಮಾತನಾಡಿ, ವಿವಿಧ ಸಮುದಾಯಗಳನ್ನು ಒಂದು ಕೂಡಿಸೋಣ ಬರುವ ದಿನಮಾನದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಂಸ್ಕಾರ-ಸಂಸ್ಜೃತಿ ಕೋಡೋಣ ಎಂದರು.
ಈ ಸಂದರ್ಭದಲ್ಲಿ ಸೇನಾ ನಿವೃತ್ತಿ ಹೊಂದಿದ ಯೋದ ರಾಜು ಹುಲಕೋಟಿ ಆಕ್ರೋಶಭರಿತ ನುಡಿಗಳ ಮೂಲಕ ನಾವೆಲ್ಲ ಒಂದಾಗದಿದ್ದರೆ ಈ ಅನ್ಯಾಯ ನಿರಂತರ ಎಂದರು.
ಅಖಿಲ ಭಾರತ ಜಂಗಮ ಸೇವಾ ಸಮಿತಿ ಅಧ್ಯಕ್ಷ ಪ್ರಬಯ್ಯ ದಂಡಾವತಿಮಠ ,ಕ್ರಾಂತಿಸೇನೆಯ ಮಹಿಳಾಧ್ಯಕ್ಷೆ ರಾಣಿ ಚಂದಾವರಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮಾತನಾಡಿದರು,
ವಿ ಬಿ ಹಿರೇಮಠ ಮೆಮೋರಿಯಲ್ ಟ್ರಸ್ಟ್ ನ ವಿ.ವಿ ಹಿರೇಮಠ, ಸಂಗಮ್ಮ ಹಿರೇಮಠ, ವಿಜಯಕುಮಾರ ಹಿರೇಮಠ, ಮುರುಗೇಶ ಬಡ್ನಿ , ಸಂಗಮೇಶ ಮೆಣಸಿನಕಾಯಿ, ಬಸವರಾಜ ಬ್ಯಾಹಟ್ಟಿ,ಡಾ. ಜಿ.ಎಸ್ ಹಿರೇಮಠ, ಸಂತೋಷ, ಶಿವಕುಮಾರ, ಉಮಾಪತಿ ಭೂಸನೂರಮಠ, ಬಸಯ್ಯ ನಂದಿಕೋಲಮಠ ಶ್ರೀಧರ ಜವಳಿ, ಆರ್ ಎಂ ಹಿರೇಮಠ ಉಪಸ್ಥಿತರಿದ್ದರು
Leave a Reply