ಪ್ರಲ್ಜಾದ ಜೋಶಿ ಸೋಲಿಸುವುದೇ ಪರಮ ಗುರಿ: ದಿಂಗಾಲೇಶ್ವರ ಶ್ರೀಗಳು

admin Avatar

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸೋಲಿಸಲೇಬೇಕೆಂಬ ಹಠದೊಂದಿಗೆ ಶ್ತೀ‌ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರದ ಇತಿಹಾಸದಲ್ಲೇ ಸ್ವಾಮೀಜಿಯೊಬ್ಬರು ಚುನಾವಣೆಗೆ ನಿಂತಿದ್ದು, ಇದೇ ಬಾರಿ ಪ್ರಥಮವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಧರ್ಮಯುದ್ಧ ಸಾರಿದ್ದಾರೆ.
ಧಾರವಾಡದ ಲಿಂಗಾಯತ ಟೌನ್ ಹಾಲ್ ನಿಂದ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ನಾವು ಧರ್ಮಸಮನ್ವಯ ಸಾರುವ ಉದ್ದೇಶದಿಂದ ನಾಮಪತ್ರ ಸಲ್ಲಿಸಿರುವೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಕುರಿತು ನೀಡಿರುವ ಹೇಳಿಕೆಗಳಿಂದ ಅವರು ಸೋಲಿನ ಭಯದಿಂದ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ಬಸವಾದಿ ಶರಣರ ಪರಂಪರೆ ನಾಡಿನಲ್ಲಿ ನಾಶವಾಗುತ್ತಿದೆ. ನಮ್ಮ ಕನ್ನಡ ನಾಡಿನಿಂದ ಭಸ್ಮ ಭಂಡಾರಗಳು ಮಾಯವಾಗಿ ಆ ಜಾಗದಲ್ಲಿ ಬೇರೆಯದೆ ಆಕ್ರಮಿಸುತ್ತಿವೆ. ಈ ನಾಡಿನಲ್ಲಿ ತನ್ನದೇ ಆದ ಪರಂಪರೆ ಇತಿಹಾಸವಿದೆ. ಈ ನಾಡಿನ ಕಾಳಜಿಯನ್ನು ಯಾರು ತಿರಸ್ಕಾರ ಮಾಡುತ್ತಿದ್ದಾರೆ. ಅದರ ವಿರುದ್ಧ ನಾವು ಸಿಡಿದೆದ್ದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

‘ಮಠಾಧೀಶರನ್ನು ಸೇರಿಸಿ ತೋರಿಸುವೆ’

ಕಾವಿಧಾರಿಗಳಿಂದ ಸಲಹೆ ಚುನಾವಣೆಗಳನ್ನು ಪಡೆದುಕೊಂಡು, ಚುನಾವಣೆಗೆ ನಿಂತಿದ್ದೇನೆ. ಅವರನ್ನು ಚುನಾವಣೆ ಪ್ರಕ್ರಿಯೆಗೆ ಬಳಸಿಕೊಳ್ಳಲು ಇಷ್ಟವಿಲ್ಲ. ಒಂದು ವೇಳೆ ಮಠಾಧಿಪತಿಗಳ ಸಂಖ್ಯೆ ಅನಿವಾರ್ಯ ಎಂದಾದರೆ ಎರಡು ದಿನದಲ್ಲಿ ಮಠಾಧಿಪತಿಗಳನ್ನು ಸೇರಿಸಿ ತೋರಿಸುವೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.
“ನನಗೆ ಮಾನಹಾನಿ, ಜೀವಭಯ ಸೇರಿದಂತೆ, ಮಠವನ್ನು ಬಿಡಿಸುತ್ತೇವೆ. ಖಾವಿ ಬಿಡುಸುತ್ತೇವೆ ಹಾಗೂ ನನ್ನ ಹಿತೈಶಿಗಳಿಂದ ದೂರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬ್ರಿಟಿಷ್ ಪಾಲಿಸಿ ಮರಕಳುಸುತ್ತಿದೆ ಎಂದು ಅನಿಸುತ್ತಿದೆ” ಎಂದರು.
ನಮ್ಮ ಪ್ರಚಾರ ಧರ್ಮದ ದಾರಿಯಲ್ಲಿ ಇರುತ್ತೆ. ಪಾಪದ ದಾರಿಯಲ್ಲಿ ಇರಲ್ಲ. ದೂರವಾಣಿ ಕರೆಗಳ ಮೂಲಕ, ಮಾಧ್ಯಮಗಳ ಮೂಲಕ ಸಂಪರ್ಕ ಮಾಡುತ್ತಿದ್ದೇವೆ. ಈಗಾಗಲೇ ಅಲ್ಲಲ್ಲಿ ಸಭೆಗಳನ್ನು ಮಾಡಿದ್ದೇವೆ. ನಾಡಿನ ಸಂಸ್ಕೃತಿ, ಸಿದ್ಧಾಂತ, ವಿದ್ಯಾರ್ಥಿಗಳಿಗೆ, ರೈತರಿಗೆ, ನಿರುದ್ಯೋಗಿಗಳಿಗೆ ಅವಕಾಶ ಸಿಗುವವರೆಗೂ ಹೋರಾಟ ಮಾಡಿ ಮಾಡುತ್ತೇವೆ. ನಾವು ಚುನಾವಣೆಯಲ್ಲಿ ಮೊದಲಿಗೆ, ಜೋಶಿ ಅವರನ್ನು ಸೊಲಿಸಬೇಕು ಎನ್ನುವ ಯೋಚನೆಯಲ್ಲಿದ್ದೀವಿ. ಈಗ ಅನಿವಾರ್ಯವಾಗಿ ನಾವು ಗೆಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.

Leave a Reply

Your email address will not be published. Required fields are marked *