ಮುಖ್ಯಮಂತ್ರಿ ಸಾಲ ಮಾಡುವುದು ಜನ ಸಾಲ ತೀರಿಸುವುದಾಗಿದೆ: ಬಸವರಾಜ ಬೊಮ್ಕಾಯಿ

admin Avatar

ಹಾವೇರಿ:(ರಾಣೆಬೆನ್ನೂರು) ಜಾಹಿರಾತುಗಳ ಮೂಲಕ ಸರ್ಕಾರ ತನ್ನ ಸಾಧನೆಗಳನ್ನು ಬಿಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಸಾಲ ಮಾಡುತ್ತಿದ್ದಾರೆ. ಅದನ್ನು ರಾಜ್ಯದ ಜನ ತೆರಿಗೆ ಕಟ್ಟುವ ಮೂಲಕ ತೀರಿಸುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಣಡಬೆನ್ನೂರಿನಲ್ಲಿಂದು ಎಪಿಎಂಸಿ ವರ್ತಕ ರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜಕಾರಣದ ಲೆಟೆಸ್ಟ್ ಸುದ್ದಿ ಸಿಗುವುದು ಮಾರುಕಟ್ಡೆಯ ವ್ಯಾಪಾರಸ್ಥರ ಬಳಿ.
ರೈತರ ಕಡೆಯಿಂದ ಗ್ರಾಮೀಣ ರಾಜಕಾರಣ, ವಿವಿಧ ಊರಿಂದ ಬರುವ ವರ್ತಕರ ಮಾಹಿತಿ ಎಲ್ಲವೂ ಮಾಹಿತಿ ಸಿಗುತ್ತದೆ.
ಹುಬ್ಬಳ್ಳಿ ಧಾರವಾಡ ನಂತರ ಬೆಂಗಳೂರು ವರೆಗೂ ರಾಣೆಬೆನ್ನೂರು ಎಪಿಎಂಸಿ ಅತ್ಯಂತ ತುರುಸಿನಿಂದ ವ್ಯಾಪಾರ ನಡೆಯುತ್ತದೆ. ಅದಕ್ಕಾಗಿ ರಾಣೆಬೆನ್ನೂರಿಗೆ ಮಗಾ ಎಪಿಎಂಸಿ ನಮ್ಮ ಅವಧಿಯಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಕಾಯಕವೇ ಕೈಲಾಸ ನಮ್ಮ ಸಂಸ್ಕೃತಿ, ಕನ್ನಡದಲ್ಲಿ ಒಂದು ಗಾದೆ ಮಾತಿದೆ ದುಡ್ಡೆ ದೊಡ್ಡಪ್ಪ, ಆದರೆ, ದುಡಿಮೆಯೇ ದೊಡ್ಡಪ್ಪ, ದುಡಿದರೆ ದುಡ್ಡು ತಾನಾಗಿಯೇ ಬರುತ್ತದೆ. ವರ್ತಕರು ದುಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ಕಟ್ಟುವುದರಿಂದ ಆ ಹಣದಿಂದ ಸರ್ಕಾರ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತದೆ.
2021-22 ರಲ್ಲಿ ನಾನು 68 ಸಾವಿರ ಕೋಟಿ ಸಾಲ ಮಾಡಿದ್ದೆ, ಉಳಿದ ಅಭಿವೃದ್ದಿ ಕಾರ್ಯಗಳನ್ನು ಆದಾಯ ಹೆಚ್ಚಳ ಮಾಡುವ ಮೂಲಕ ಅಭಿವೃದ್ದಿ ಮಾಡಿದ್ದೇವೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದ ಮೇಲೆ ಬಜೆಟ್ ಘೋಷಣೆಗಿಂತ ಐದು ಸಾವಿರ ಕೋಟಿ ಹೆಚ್ಚು ಸಾಲ ಮಾಡಿದ್ದಾರೆ. ಈ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮುಖ್ಯಮಂತ್ರಿ ಸಾಲ ಮಾಡಬಹುದು, ಅದನ್ನು ಜನರು ತೀರಿಸುವುದು ಎಂದು ಹೇಳಿದರು.
ದೇಶಕ್ಕೆ ಒಬ್ಬ ಸಮರ್ಥ ನಾಯಕತ್ವ ಬೇಕು ಐದು ವರ್ಷ ಸುಭದ್ರ ಸರ್ಕಾರ ನೀಡಲು ಬಹುಮತ ಪಡೆದ ಸರ್ಕಾರ ಬೇಕು. ಅದಕ್ಕಾಗಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *