ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದ ರವೀನಾ ಲಮಾಣಿ

admin Avatar

ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದ ರವೀನಾ ಲಮಾಣಿ

ಗದಗ: ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಕೂಲಿಕಾರರ ಮಗಳು ರವೀನಾ ಸೋಮಪ್ಪ ಲಮಾಣಿ ರಾಜ್ಯಕ್ಕೆ ಎರಡನೇ ಸ್ಥಾನಗಳಿಸಿ ಕೀರ್ತಿ ತಂದಿದ್ದಾಳೆ.
ಹೌದು ರವೀನಾ ಲಮಾಣಿಯವರು ಧಾರವಾಡ ಜಿಲ್ಲೆಯ ಕೆ.ಇ.ಬೋರ್ಡ್ ನಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಇವರ ತಂದೆ ಸೋಮಪ್ಪ ಲಮಾಣಿ ಹಾಗೂ ತಾಯಿ ರೇಣವ್ವ ಲಮಾಣಿಯವರಿಗೆ 5 ಜನ ಮಕ್ಕಳು ಎರಡು ಗಂಡು ಮಕ್ಕಳು 3 ಹೆಣ್ಣಮಕ್ಕಳು ಇದರಲ್ಲಿ ರವೀನಾ ಲಮಾಣಿಯವರು ಮೂರನೇಯವರು, ತಂದೆ ತಾಯಿಯವರು ಕೂಲಿ ಕೆಲಸ ಮಾಡಿ ರವೀನಾಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಇವರು ಕೂಲಿ ಕೆಲಸಕ್ಕೆ ವಲಸೆ ಹೋಗಿ ದುಡಿಯುತ್ತಿದ್ದರು ತಂದೆ ತಾಯಿ ಕಷ್ಟಪಟ್ಟು ದುಡಿಯುತ್ತಿದ್ದನ್ನು ರವೀನಾ ಅವರು ದಿನನಿತ್ಯ ನೋಡುತ್ತಿದ್ದರಿಂದ ರವೀನಾಗೆ ನಾನು ಓದಬೇಕು ಎನ್ನುವ ಛಲ ಮೂಡಿತು ಇದರ ಬೆನ್ನಲ್ಲೆ ನನಗೆ ತಕ್ಕ ಫಲಿತಾಂಶ ಬಂದಿದೆ ಇದರಿಂದ ನನಗೆ ತುಂಬಾನೆ ಖುಷಿ ಆಗುತ್ತಿದೆ ಎಂದು ಹೇಳುತ್ತಾಳೆ ರವೀನಾ.
ಇನ್ನೂ ರವೀನಾ ಲಮಾಣಿಯವರು ಬಿಡುವಿನ ವೇಳೆ ಮನೆಯ ಕೆಲಸ ಹೊಲದಲ್ಲಿ ಕೆಲಸ ಮಾಡಿ ತಂದೆ ತಾಯಿಯವರಿಗೆ ಸಹಾಯ ಮಾಡುತ್ತಿದ್ದಳು.
ಮನೆಯ ಪರಿಸ್ಥಿತಿ ಆರ್ಥಿಕ ಪರಿಸ್ಥಿತಿ ನೋಡಿ ನಾನು ವಿದ್ಯಾಭ್ಯಾಸ ಕೈಬಿಡಬೇಕೆಂದು ಯೋಚಿಸಿದ್ದೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಇಲ್ಲಿಗೆ ವಿದ್ಯಾಭ್ಯಾಸವನ್ನು ಬಿಟ್ಟಬಿಡುತ್ತೇನೆ ಎಂದು ಪೋಷಕರಿಗೆ ಹೇಳಿದ್ದೆ. ಆದರೆ ನಮ್ಮ ತಂದೆ ತಾಯಿಯವರು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಬಿಡಬೇಡ. ನಾವು ಸಾಲ ಮಾಡಿ ನಿನಗೆ ಓದಿಸುತ್ತೇವೆ ಎಂದು ಹೇಳಿ ನನಗೆ ದೈರ್ಯ ತುಂಬಿದಕ್ಕೆ ಇವತ್ತು ದ್ವಿತೀಯ ಪಿಯುಸಿ ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಕ್ಕೆ ಬಂದಿದ್ದೇನೆ. ಇಂಥ ತಂದೆ ತಾಯಿಯವರು ಸಿಗಬೇಕ ಅಂದರೆ ಪುಣ್ಯ ಮಾಡಿರಬೇಕು ಮುಂದೆ ಯುಪಿಎಸ್ಸಿ ಮಾಡಬೇಕು ಅಂದುಕೊಂಡಿದ್ದೇನೆ ಎಂದರು ಸಾಧಕ ವಿದ್ಯಾರ್ಥಿನಿ ಹೇಳಿದರು.

Leave a Reply

Your email address will not be published. Required fields are marked *