ಗದಗ: ಮಾರ್ಚ 25 ರಿಂದ 29 ರವರೆಗೆ ಗದಗ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಅಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆ ಕಾಪಾಡಿಕೊಳ್ಳುವ ಸಲುವಾಗಿ ಈ ಕೆಳಗಿನ ಆರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಮದ್ಯ ಸಾಗಾಟ ಮತ್ತು ಮಾರಾಟ ನಿಷೇಧಿಸಲಾಗಿದೆ.
ಗದಗ ಶಹರ ವ್ಯಾಪ್ತಿಯಲ್ಲಿ ಮಾರ್ಚ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ 30 ರ ಬೆಳಗಿನ 6 ಗಂಟೆಯವರೆಗೆ, ಬೆಟಗೇರಿ – ಮಾರ್ಚ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ 30 ರ ಬೆಳಗಿನ 6 ಗಂಟೆಯವರೆಗೆ , ಬೆಟಗೇರಿ ಬಡಾವಣೆ – ಮಾರ್ಚ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ 30 ರ ಬೆಳಗಿನ 6 ಗಂಟೆಯವರೆಗೆ , ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯ ಗದಗ-ಬೆಟಗೇರಿಯ ನಗರಸಭೆಯ ಮದ್ಯದಂಗಡಿಗಳು ಮಾರ್ಚ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ 30 ರ ಬೆಳಗಿನ 6 ಗಂಟೆಯವರಗೆ , ಮುಳಗುಂದ – ಮಾರ್ಚ 25 ರ ಬೆಳಗಿನ 6 ಗಂಟೆಯಿಂದ ಮಾರ್ಚ 26 ರ ರಾತ್ರಿ 12 ಗಂಟೆಯವರೆಗೆ, ಲಕ್ಷ್ಮೇಶ್ವರ – ಮಾರ್ಚ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ 30 ರ ಬೆಳಗಿನ 6 ಗಂಟೆಯವರೆಗೆ, ನರಗುಂದ (ನರಗುಂದ ಪೊಲೀಸ ಠಾಣಾ ವ್ಯಾಪ್ತಿ) -ಮಾರ್ಚ 26 ರ ಮುಂಜಾನೆ 6 ಗಂಟೆಯಿಂದ ಮಾರ್ಚ 27 ರಬೆಳಗಿನ 6 ಗಂಟೆಯವರೆಗೆ, ನರಗುಂದ ಪೊಲೀಸ ಠಾಣಾ ವ್ಯಾಪ್ತಿಯ ಕೊಣ್ಣೂರು ಮತ್ತು ಶಿರೋಳ ಗ್ರಾಮ- ಮಾರ್ಚ 27 ರ ಬೆಳಗಿನ 6 ರಿಂದ ಮಾರ್ಚ 28 ರ ಬೆಳಗಿನ 6 ರವರೆಗೆ, ರೋಣ- ಮಾರ್ಚ 25 ರ ಬೆಳಗಿನ 6 ಗಂಟೆಯಿಂದ ಮಾರ್ಚ 26 ರ ರಾತ್ರಿ 12 ಗಂಟೆಯವರೆಗೆ, ಗಜೇಂದ್ರಗಡ – ಮಾರ್ಚ 26 ರ ಬೆಳಗಿನ 6 ಗಂಟೆಯಿಂದ ಮಾರ್ಚ 27 ರ ಬೆಳಗಿನ 6 ಗಂಟೆಯವರೆಗೆ, ನರೇಗಲ್- ಮಾರ್ಚ 25 ರ ಬೆಳಗಿನ 6 ಗಂಟೆಯಿಂದ ಮಾರ್ಚ 26 ರ ರಾತ್ರಿ 12 ಗಂಟೆಯವರೆಗೆ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಈ ದಿನಗಳಂದು ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಯಾವತ್ತೂ ಬಾರುಗಳು, ಕ್ಲಬ್ಬುಗಳು, ಬಿಯರ್, ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳನ್ನು ಮುಚ್ಚತಕ್ಕದ್ದು. ಅಲ್ಲದೇ ಪರಿಸ್ಥಿತಿಗನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಅಬಕಾರಿ ಇನ್ಸೆಪೆಕ್ಟರ್ ಹಾಗೂ ಅಬಕಾರಿ ಉಪ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈಶಾಲಿ ಎಂ.ಎಲ್. ಆದೇಶಿಸಿದ್ದಾರೆ.
Leave a Reply