ಮಹಿಳೆಯರ ಸಾಧನೆ‌ ಅನನ್ಯ: ಶ್ರೀ ತೋಂಟದ ಸಿದ್ಧರಾಮ ಶ್ರೀಗಳು

admin Avatar

ಗದಗ: ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು
ನಗರದ ತೋಂಟದಾರ್ಯಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಿದ್ದ ೨೬೮೪ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದಿನ ಮಹಿಳೆಯರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಮಹಿಳೆಯರಿಗೆ ಶಿಕ್ಷಣದಲ್ಲಿ ಸಮಾನತೆ ಕಲ್ಪಿಸಿದ್ದು, ಒಂದು ಕಾಲದಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಹೆಣ್ಣು-ಗಂಡು ತಾರತಮ್ಯ ಇತ್ತು. ಬಸವಾದಿ ಶಿವಶರಣರು ಈ ಭೇದವನ್ನಳಿದು ಸಮಾನತೆ ಸಂದೇಶ ಸಾರಿದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.  
ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆ ಮುಂದುವರೆಯುವ ಅನಿವಾರ್ಯತೆ ಇದೆ. ಮೊಟ್ಟಮೊದಲ ಕವಯಿತ್ರಿ ಅಕ್ಕಮಹಾದೇವಿ ಅನೇಕ ವಚನಗಳನ್ನು ರಚಿಸಿದರು. ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ಕೊಟ್ಟವರು. ಹೆಣ್ಣು ಜಗದ ಕಣ್ಣು. ೧೨ ನೇ ಶತಮಾನದ ಶಿವಶರಣೆಯರ ಸಮಾಜಿಕ ಪ್ರಜ್ಞೆ, ತತ್ತಾ÷್ವದರ್ಶಗಳು ಪ್ರಸ್ತುತ ಮಹಿಳೆಯರಿಗೆ ಮಾದರಿ ಎಂದು ತಿಳಿಸಿದರು.  
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ನಿಮಿತ್ತ ಡಾ. ತೇಜ ಚನ್ನಯ್ಯ ಹಿರೇಮಠ, ಕನ್ನಡಪ್ರಭ ಎಷ್ಯಾನೆಟ್ ಸುವರ್ಣ ನ್ಯೂಜ್ ವತಿಯಿಂದ ‘ಸುವರ್ಣ ಸಾಧಕ’ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಬಲರಾಮಸಾ ಷಣ್ಮುಖಸಾ ಬಸವಾ ಅವರು ಸಂಮಾನ ಸ್ವೀಕರಿಸಿ ಮಾತನಾಡಿದರು.
ಹೇಮಾವತಿ ಶ್ರೀಕಾಂತ ಹೂಲಿ ವಚನ ಸಂಗೀತ ಹಾಡಿದರು. ಗುರುನಾಥ ಸುತಾರ ಅವರು ತಬಲಾ ಸಾಥ್ ನೀಡಿದರು. ಧರ್ಮಗ್ರಂಥ ಪಠಣವನ್ನು ಅನ್ವಿತಾ ಆರ್. ಪಾಟೀಲ, ವಚನ ಚಿಂತನೆಯನ್ನು ವೈಭವಿ ಎಸ್. ಗಾಣಿಗೇರ ಮಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *

Search
Cateegories
Tags

There’s no content to show here yet.