ಹಾವೇರಿ ಗೆಲುವಿಗೆ ರಣತಂತ್ರ: ಸಚಿವ ಎಚ್ ಕೆ ಪಾಟೀಲ ನಿವಾಸದಲ್ಲಿ ಕ್ಷೇತ್ರ ವ್ಯಾಪ್ತಿ ಶಾಸಕರು, ಹಿರಿಯರ ಸಭೆ

admin Avatar

ಗದಗ : ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೆಸರು ಘೋಷಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿನ ಸಚಿವ ಎಚ್ ಕೆ ಪಾಟೀಲ ನಿವಾಸದಲ್ಲಿ ಗದಗ – ಹಾವೇರಿ ಕ್ಷೇತ್ರದಲ್ಲಿ ಎಲ್ಲ ಶಾಸಕರು ಹಾಗೂ ಮುಖಂಡರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿ ಶಾಸಕ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ, ರೋಣ ಶಾಸಕ ಜಿ. ಎಸ್. ಪಾಟೀಲರು, ಹಾನಗಲ್ ಶಾಸಕ ಶ್ರೀನಿವಾಸ ಮಾನೆ , ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಿರೇಕೆರೂರ ಶಾಸಕ ಯು.ಬಿ. ಬಣಗಾರ, ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಲೋಕಸಭಾ ಮಾಜಿ ಸದಸ್ಯ ಐ. ಜಿ. ಸನದಿ, ಹಿರಿಯ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ಕ್ಷೇತ್ರದ ಶಾಸಕರು ಕೂಡಲೇ ಕಾರ್ಯತತ್ಪರರಾಗಬೇಕೆಂದು ಸಚಿವರು ಮನವಿ ಮಾಡಿದರು.

Leave a Reply

Your email address will not be published. Required fields are marked *

Search
Cateegories
Tags

There’s no content to show here yet.