ಚಾರಿತ್ರಿಕ ದಾಖಲೆ ಸಂರಕ್ಷಣಾ ಶಾಖೆಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ , ಪರಿಶೀಲನೆ

admin Avatar

ಬೆಂಗಳೂರು: ವಿಧಾನಸೌಧದ ನೆಲ ಮಹಡಿಯಲ್ಲಿರುವ ಕರ್ನಾಟಕ ಸರ್ಕಾರದ ಪತ್ರಗಾರ ಇಲಾಖೆಯ ಚಾರಿತ್ರಿಕ ದಾಖಲೆಯ ಶಾಖೆಗೆ ಸಭಾಪತಿ ಬಸವರಾಜ ಹೊರಟ್ಟಿ ಅನರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿ ಕೆಲ ಮಾಹಿತಿಯನ್ನ ಪಡೆದರು.

ಅತ್ಯಂತ ಮಹತ್ವದ ಚಾರಿತ್ರಿಕ ಸಂಗತಿಗಳನ್ನು ಹೊಂದಿದ ದಾಖಲೆಗಳ ಸಂರಕ್ಷಣೆಗೆ ಇನ್ನಷ್ಟು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲಿಯೂ ಮಹತ್ವದ ದಾಖಲೆಗಳು ಹಾನಿಯಾಗದಂತೆ  ನೋಡಿಕೊಳ್ಳಬೇಕೆಂದು ಸೂಚಿಸಿದರು. ಕೆಲ ಮಾರ್ಪಾಡುಗಳಿಗೆ ಮಾರ್ಗದರ್ಶನ ಮಾಡಿದ ಸಭಾಪತಿಗಳು ಇಲಾಖೆಗಳ ಇನ್ನುಳಿದ ಕಾರ್ಯಗಳ ಕುರಿತು ಮೆಚ್ಚುಗೆಯನ್ನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಮಹೇಶ ವಾಳ್ವೇಕರ್ ಸೇರಿದಂತೆಪತ್ರಾಗಾರ ಇಲಾಖೆಯ ಹಿರಿಯ ಆಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Search
Cateegories
Tags

There’s no content to show here yet.