ಕಿಮ್ಸ್ ಸಂಸ್ಥೆಯ ವೈದ್ಯರ ಸೇವೆ ಶ್ಲಾಘನೀಯ:ಜಿ.ಎಸ್.ಪಾಟೀಲ

admin Avatar

ಗದಗ; ಉತ್ತರ ಕರ್ನಾಟಕ ಭಾಗದ ಜನರಿಗೆ ಕಿಮ್ಸ್ ಸಂಸ್ಥೆಯು ಉತ್ತಮ ಚಿಕಿತ್ಸೆ ನೀಡುತ್ತಿದೆ. ಈ ಸಂಸ್ಥೆಯ ವೈದ್ಯರ ಸೇವೆ ಶ್ಲಾಘನೀಯವಾದುದು ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ನ ಅಧ್ಯಕ್ಷ ಜಿ.ಎಸ್‌.ಪಾಟೀಲ್ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ನ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವತಿಯಿಂದ ಸಿ.ಎಸ್.ಆರ್. ನಿಧಿಯಡಿಯಲ್ಲಿ ರೂ.1 ಕೋಟಿ 75 ಲಕ್ಷ ವೆಚ್ಚದ ವೈದ್ಯಕೀಯ ಉಪಕರಣಗಳಾದ ನ್ಯೂಯೋನಟಲ್ ಇನ್ಕುಬೇಟರ್ಸ್ ಮತ್ತು ಆಪರೇಟಿಂಗ್ ಲ್ಯಾಪ್ರೋಸ್ಕೋಪಿ  ಖರೀದಿಗಾಗಿ ಕಿಮ್ಸ್ ಗೆ ಚೆಕ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1957 ರಲ್ಲಿ ಕಿಮ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಗುಣಮಟ್ಟದ ಚಿಕಿತ್ಸೆಗೆ ಕಿಮ್ಸ್ ಹೆಸರಾಗಿದೆ. ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ರೋಗಿಗಳು ಅಲ್ಲಿ ದಾಖಲಾಗುತ್ತಾರೆ. ಸಾವಿರಕ್ಕೂ ಅಧಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಅನೇಕರು ಗುಣಮುಖರಾಗಿದ್ದಾರೆ ಎಂದರು.
ಸುಧಾರಿತ ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಬೇಕು. ಕಿಮ್ಸ್ ಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಭಾಗದ ಊರುಗಳ ಜನರಿಗೆ ಒಳ್ಳೆಯ ಚಿಕಿತ್ಸೆ ನೀಡುವಲ್ಲಿ ವೈದ್ಯರು ಮುಂದಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಕಿಮ್ಸ್ ಸಂಸ್ಥೆ ಸಂಜೀವಿನಿ ಆಗಿದೆ. ಇಲ್ಲಿನ ವೈದ್ಯರ ಸೇವೆ ಅನನ್ಯವಾದುದು. ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಸೇವೆ ದೊರೆಯುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ನಾನು ಸಹ ಇಲ್ಲಿ ದಾಖಲಾಗಿದ್ದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ವೈದ್ಯರು ಮಾಡಿದರು. ಹೆಚ್ಚಿನ ಪ್ರಮಾಣದ ಅನುದಾನ ಈ ಸಂಸ್ಥೆಗೆ ದೊರೆಯಬೇಕಿದೆ ಎಂದರು.
ವೈದ್ಯರು ಮಾನವೀಯತೆ, ಮನುಷ್ಯತ್ವವನ್ನು ಹೊಂದಬೇಕಾಗಿದೆ. ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಇಂದು ಹಲವಾರು ಮಾರಣಾಂತಿಕ ಖಾಯಿಲೆಗಳು ಜನರಿಗೆ ಬರುತ್ತಿವೆ. ವಿವಿಧ ರೋಗಗಳ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆಯೋಜನೆಯಾಗಬೇಕಿದೆ. ವೈದ್ಯರು ಪ್ರಾಮಾಣಿಕ ಸೇವೆಯನ್ನು ಜನರಿಗೆ ನೀಡಬೇಕು‌ ಎಂದು ಹೇಳಿದರು.
ಕಿಮ್ಸ್ ಗೆ ಹೆಚ್ಚಿನ ಅನುದಾನವನ್ನು ತರುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ. ನನ್ನ ಕೈಲಾದ ಸಹಾಯ ಸಹಕಾರವನ್ನು ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ನ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ಕಿಮ್ಸ್ ಸಂಸ್ಥೆ ಅತಿ ಶ್ರೇಷ್ಠ ಸಂಸ್ಥೆಯಾಗಿದೆ. ಬಹಳಷ್ಟು ಹೊರ ಮತ್ತು ಒಳ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದರ ಮೂಲಕ ಅವರು ಗುಣಮುಖರಾಗಿ ಹೋಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದೆ. ಸಿ.ಎಸ್.ಆರ್. ನಿಧಿಯನ್ನು ಸರಿಯಾಗಿ ಬಳಕೆಯಾಗಬೇಕು. ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯು ದೊರೆಯುವಂತಾಗಬೇಕಿದೆ. ಸಮಾಜಕ್ಕೆ ನಿಮ್ಮದೇಯಾದ ಕೊಡುಗೆ ನೀಡಿ ಎಂದರು.
ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಎ.ಎಂ.ಕುಲಕರ್ಣಿ, ಬಿ.ಜಿ. ವಸ್ತ್ರದ, ಡಾ.ಸಿ.ಎಸ್.ಪಾಟೀಲ, ಐ.ಎಸ್.ಪಾಟೀಲ, ಮುಖಂಡರಾದ ಅನಿಲಕುಮಾರ ಪಾಟೀಲ, ಶರಣಪ್ಪ ಪಟಗಿ, ಕಿಮ್ಸ್ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಸೇರಿದಂತೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಸುಕನ್ಯಾ ಪ್ರಾರ್ಥಿಸಿದರು. ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.‌ಕಮ್ಮಾರ ಸ್ವಾಗತಿಸಿದರು. ಡಾ.ರಾಜಶೇಖರ ದ್ಯಾಬೇರಿ ನಿರೂಪಿಸಿದರು

Leave a Reply

Your email address will not be published. Required fields are marked *

Search
Cateegories
Tags

There’s no content to show here yet.