Wednesday, November 29, 2023
HomePOLITICSಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಮೇಲ್ಮನೆಗೆ ಅಧ್ಯಕ್ಷರಾಗಿ ಡಿ.ಆರ್. ಪಾಟೀಲ ನೇಮಕ….

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಮೇಲ್ಮನೆಗೆ ಅಧ್ಯಕ್ಷರಾಗಿ ಡಿ.ಆರ್. ಪಾಟೀಲ ನೇಮಕ….

ಗದಗ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆಜೀವ ಸದಸ್ಯರು, ಆಶ್ರಯದಾತರು, ಪೋಷಕರ ಮನೆ(ಮೇಲ್ಮನೆ) ಅಧ್ಯಕ್ಷನ್ನಾಗಿ ಗದುಗಿನ ಮಾಜಿ ಶಾಸಕ ಡಿ.ಆರ್. ಪಾಟೀಲ, ಉಪಾಧ್ಯಕ್ಷರನ್ನಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿಯ ಬಿ.ಆರ್ ಬಾಗೇವಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಧಾರವಾಡದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಶ್ರೀ ಸಿದ್ದಾರೂಢ ಮಠದ ಟ್ರಸ್ಟ್ ಕಮೀಟಿ ಮುಖ್ಯ ಆಡಳಿತಗಾರರಾಗಿರುವ ಕೆ.ಜಿ ಶಾಂತಿ ಅವರು ಶ್ರೀಮಠದ ಟ್ರಸ್ಟಿನ ಗೊತ್ತುವಳಿ ಮೇರೆಗೆ ಟ್ರಸ್ಟಿನ ಅವಧಿಯವರೆಗೆ ನೇಂಕ ಮಾಡಿ ಆದೇಶ ಹೊರಡಿಸಿದ್ದಾರೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಡಿ.ಆರ್. ಪಾಟೀಲ ಅವರು ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದು, ಗದಗ ಮತಕ್ಷೇತ್ರದ ಶಾಸಕರಾಗಿ ೪ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಸಂತ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ರಾಜ್ಯ ಮತ್ತು ರಾಷ್ಟçಮಟ್ಟದ ಸಹಕಾರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಹಕಾರ, ಎಪಿಎಂಸಿ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!