Wednesday, November 29, 2023
HomePOLITICSಹಾವೇರಿ ಲೋಕ ಕಣ: ಕೈ ಅಭ್ಯರ್ಥಿ ಯಾರು…? ಮಾಜಿ ಶಾಸಕ ಡಿ ಆರ್ ಪಾಟೀಲ ಇನ್ನೊಂದು...

ಹಾವೇರಿ ಲೋಕ ಕಣ: ಕೈ ಅಭ್ಯರ್ಥಿ ಯಾರು…? ಮಾಜಿ ಶಾಸಕ ಡಿ ಆರ್ ಪಾಟೀಲ ಇನ್ನೊಂದು ‘ಕೈ’ ನೋಡ್ತಾರಾ… 15 ವರ್ಷಗಳ ರಾಜಕೀಯ ಅಜ್ಞಾತವಾಸಕ್ಕೆ ಬೀಳುತ್ತಾ ಫುಲ್ ಸ್ಟಾಪ್….!

ಗದಗ: ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ವಿಷಯ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
ಗ್ಯಾರಂಟಿ ಸ್ಕೀಮುಗಳು ಕೈ ಹಿಡಿದಿದ್ದರಿಂದ ಕಾಂಗ್ರೆಸ್ ನ ಮಾಜಿಗಳೆಲ್ಲರೂ ಹಾಲಿ ಶಾಸಕರಾಗಿದ್ದಾರೆ. ಹೀಗಾಗಿ‌ ಯಾರನ್ನು ನಿಲ್ಲಿಸಬೇಕು ಎಂಬುದರ ಬಗ್ಗೆ ಗಮನ ಚರ್ಚೆ ನಡೆದಿದೆ.
ಹೊಸಬರಿಗೆ ಅವಕಾಶ ನೀಡಬೇಕೋ ಅಥವಾ ಮಾಜಿಗಳ ಪೈಕಿ ಉಳಿದಿರುವ ಹಾಗೂ ಕೊಂಚ ಜನರೊಂದಿಗೆ ಒಡನಾಟ ಹೊಂದಿರುವ ವರ್ಚಸ್ಸಿನ ನಾಯಕರನ್ನು ಕಣಕ್ಕಿಳಿಸಬೇಕೋ ಎಂಬ ಚಿಂತನೆ ನಡೆದಿದೆ.
ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ‌ವರಿಷ್ಢರು‌ ಇಲ್ಲಿವರೆಗೆ ಅಲ್ಪಸಮುದಾಯಕ್ಕೆ (ಕಳೆದ ಚುನಾವಣೆ ಹೊರತುಪಡಿಸಿ) ಅದ್ಯತೆ ನೀಡುತ್ತ ಬಂದಿದ್ದಾರೆ. ಆದರೆ, 2024ರ ಲೋಕ ಸಮರದಲ್ಲಿ ಮತ್ತೊಮ್ಮೆ ಸಲೀಂ ಅಹ್ಮದ ಅವರಿಗೆ ಕಾಂಗ್ರೆಸ್ ಮುಖಂಡರು‌ ಮಣೆ‌ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಏತನ್ಮಧ್ಯೆ ಕಳೆದ ಸಲ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ವಿರುದ್ಧ ಸೋಲುಂಡಿದ್ದ ಗದಗ ಹುಲಕೋಟಿಯ ಮಾಜಿ ಶಾಸಕ ಡಿ ಆರ್ ಪಾಟೀಲ ಇನ್ನೊಂದು ಕೈ ನೋಡೆ ಬಿಡೋಣವೆಂದು ಸಜ್ಜಾದರೂ ಅಚ್ಚರಿ ಪಡಬೇಕಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರ ಸಹೋದರ ಎಚ್ ಕೆ ಪಾಟೀಲ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಜತೆಗೆ ಗ್ಯಾರಂಟಿ ಸ್ಕೀಮುಗಳು ಕೈ ಹಿಡಿಯಲಿವೆ. ಕಾಂಗ್ರೆಸ್ ಪರ ಗುಡುಗು ಮಿಂಚು ಭರ್ಜರಿ ಗಾಳಿ ಮಳೆ ಸುರಿಯತೊಡಗಿದೆ. ಇಂತಹ ಸುಸಮಯದಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಇದಲ್ಲದೇ, ದೇಶದ ಬಹುತೇಕ ರಾಜ್ಯಗಳು I N D I A ಒಕ್ಕೂಟದ ಪರವಾಗಿವೆ. ಇದರಿಂದಾಗಿ ಕೇಂದ್ರದಲ್ಲಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಅದೃಷ್ಟದ ಬಾಗಿಲು ತೆರೆಯಬಾರದೇಕೆ? ಸಹೋದರ ಎಚ್ ಕೆ ಪಾಟೀಲ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು‌ 2008ರಿಂದ ಅಜ್ಞಾತವಾಸ ಅನುಭವಿಸುತ್ತಿರುವ ಡಿ ಆರ್ ಪಾಟೀಲ ಅವರಿಗೆ ರಾಜಕೀಯ ಮರುಜನ್ಮ ಸಿಗಬಹುದು ಎಂದು ಅವರ ಅನೇಕ ಬೆಂಬಲಿಗರು, ಹಿತೈಷಿಗಳ ಆಶಯವಾಗಿದೆ.
ಆದರೆ, ಇಲ್ಲೊಂದು ತಾಂತ್ರಿಕ ಸಮಸ್ಯೆ ಎದುರಾಗತೊಡಗಿದೆ. ಅದೆನೆಂದರೆ ಡಿ ಆರ್ ಪಾಟೀಲ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರಸ್ ನಿಂದ ಸ್ಪರ್ಧಿಸಿ ಸೋಲುಂಡ ಬಳಿಕ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು.
ಅವರು ಮಾಡಿದ್ದ ಈ ಘೋಷಣೆ ಇದೀಗ ತೊಡರುಗಾಲಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ವರಿಷ್ಠರು ಒತ್ತಡ ಹೇರಿದರೆ ಡಿ ಆರ್ ಪಾಟೀಲ ಮನಸ್ಸು ಬದಲಿಸಬಹುದು ಎಂಬ ಮಾತುಗಳು ಕೇಳಿ ಬರ್ತಿವೆ.
ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಖಾಡಕ್ಕಿಳಿದರೆ ಕಣ ರಣ ರೋಚಕವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!