ನವದೆಹಲಿ: ಭಾರತೀಯ ತಂಡದ ಮಾಜಿ ಕ್ರಿಕೆಟಿಗ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರ ಆಗುವ ಬಯಕೆ ಹೊಂದಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ ಉಲ್ ಹಕ್ ನೀಡಿರುವ ಹೇಳಿಕೆಗೆ ಹರ್ಭಜನ್ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಏಕದಿನ ವಿಶ್ವಕಪ್ 2023 ಪಂದ್ಯಾವಳಿ ನಡೆಯುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಮಾಜಿ ನಾಯಕನ ವಿರುದ್ಧ ಹರ್ಭಜನ್ ಕಿಡಿಕಾರಿದ್ದಾರೆ.
ಇಂಜಮಾಮ ಕುಡಿದಿದ್ದಾನೆಯೇ? ನಾನು ಹೆಮ್ಮೆಯ ಭಾರತೀಯ ಹಾಗೂ ಅತ್ಯಂತ ಹೆಮ್ಮೆಯ ಸಿಖ್. ಇಂಜಮಾಮ ಅಸಂಬದ್ಧವಾಗಿ ಮಾತನಾಡಿದ್ದಾನೆ ಎಂದು ಹರ್ಭಜನ್ ಟ್ವೀಟ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕೆಲವು ಭಾರತೀಯ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಪ್ರಾರ್ಥನೆ ಮತ್ತು ನಮಾಜ್ ಮಾಡುತ್ತಿದ್ದರು. ಮೌಲಾನಾ ತಾರಿಕ್ ಜಮೀಲ್ ಅವರ ಮಾತುಗಳಿಂದ ಪ್ರಭಾವಿತರಾಗಿದ್ದರು. ಅವರು ಧರ್ಮವನ್ನು ಪರಿವರ್ತಿಸಲು ಬಯಸಿದ್ದರು ಎಂದು ಅವರು ಟಿವಿ ಸಂದರ್ಶನವೊಂದರಲ್ಲಿ ಇಂಜಮಾಮ್ ಉಲ್ ಹಕ್ ಹೇಳಿದ್ದರು.
ಇಂಜಮಾಮ ನೀಡಿರುವ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಎಕ್ಸ್ ನಲ್ಲಿ ಹರ್ಭಜನ್ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.