Wednesday, November 29, 2023
HomePOLITICSವರುಣಾ ಕ್ಷೇತ್ರವನ್ನು ಮಗನಿಗೆ ಔಟ್ ಸೋರ್ಸ್ ಕೊಟ್ಟಿದ್ದೇಕೆ?… CSR ಅಂದ್ರೆ ಕರೆಪ್ಟ್ ಸನ್ ಆಫ್ ಸಿದ್ದರಾಮಯ್ಯ…!...

ವರುಣಾ ಕ್ಷೇತ್ರವನ್ನು ಮಗನಿಗೆ ಔಟ್ ಸೋರ್ಸ್ ಕೊಟ್ಟಿದ್ದೇಕೆ?… CSR ಅಂದ್ರೆ ಕರೆಪ್ಟ್ ಸನ್ ಆಫ್ ಸಿದ್ದರಾಮಯ್ಯ…! ಪುತ್ರನ ಕಾಸಿಗಾಗಿ ಹುದ್ದೆಯಿಂದ ನಾಡಿನ ಮುಖಕ್ಕೆ ಮಸಿ…ಸಿಎಂ ಸಾಹೇಬರೇ ಹುಲಿ ಒಂಟಿಯಾಗಿ ಬೇಟೆಯಾಡ್ತದೆ…ಹೆದರಿ ಓಡಿ ಹೋಗಲ್ಲ… ಪೆನ್ ಡ್ರೈವ್ ಕಳೆದುಕೊಂಡಿಲ್ಲ… ಸಿಎಂ ವಿರುದ್ಧ ಎಚ್ ಡಿಕೆ ತೀವ್ರ ವಾಗ್ದಾಳಿ…

ಬೆಂಗಳೂರು: ವರುಣಾ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರನ್ನು‌ ಆಯ್ಕೆ ಮಾಡಿದ್ದಾರೆ. ಆದರೆ, ಅವರ ಪುತ್ರ ಯತೀಂದ್ರನಿಗೆ ಕ್ಷೇತ್ರದ ಹೊರಗುತ್ತಿಗೆ (outsource) ಏಕೆ? ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಲೇಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಒಂದು ವಿಡಿಯೋ ಬಗ್ಗೆ ನಾನು ಪ್ರಶ್ನಿಸಿದ್ದೇನೆ ಎಂಬುದು ತಿಳಿದಿರಲಿ, ವಿಡಿಯೋ ವಿಷಯ ವಿಷಯಾಂತರ ಆಗಬಾರದು. ನಾನು ಏನು ಕೇಳಿದೆ? ನೀವು ಏನು ಹೇಳುತ್ತಿದ್ದೀರಿ? ತಿರುಚುವ, ವಕ್ರೀಕರಿಸುವ ಚಾಳಿಯನ್ನು ಬಿಟ್ಟು ಬಿಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಒಂದು ವಿಡಿಯೋ ಬಿಟ್ಟಿದ್ದಕ್ಕೆ ನಿಮ್ಮ ಸಂಪುಟದ ನಿದ್ದೆ ಸಂಪೂರ್ಣ ಹಾರಿ ಹೋಗಿದೆ. ಸಚಿವರು ಕೆಲಸ ಮಾಡುವನ್ನು ಬಿಟ್ಟು ನಿಮಗೆ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರೇನು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ? ಬೆಂಬಲಿಗ ಸಚಿವರನ್ನು ಛೂ ಬಿಟ್ಟರೆ ಹೆದರಿ ಓಡಿ ಹೋಗುವ ಆಸಾಮಿ ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಾನು ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿರಲಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ, ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ನನಗೆ ತಿಳಿದಮಟ್ಟಿಗೆ ಇಲ್ಲಿವರೆಗೆ ಅಧಿಕಾರದಲ್ಲಿದ್ದ ಯಾವ ಸಿಎಂ ಕೂಡ ತಮ್ಮ ಮಕ್ಕಳಿಗೆ ಸ್ವಕ್ಷೇತ್ರದ ಹೊರಗುತ್ತಿಗೆ ನೀಡಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯೇ? ಇದ್ರೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.
ನನಗೆ ಗೊತ್ತಿರುವಂತೆ ಸಿಎಸ್ ಆರ್ (CSR) ಅಂದರೆ, Corporate social responsibility. ಈಗ ಅದು Corrupt Son Of Siddaramaiah ಆಗಿದೆ! ರಾಜ್ಯದಲ್ಲಿ CSR ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಾ? 224 ಕ್ಷೇತ್ರಗಳ CSR ಉಸ್ತುವಾರಿ ಅವರಿಗೆ ನೀಡಲಾಗಿದೆಯೇ? 2% CSR ಮೇಲೂ ನಿಮ್ಮ ಕಾಕದೃಷ್ಟಿ ಬಿದ್ದಂತಿದೆ. ನಿಮ್ಮ ಪುತ್ರನ ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡಿಗೆ ಮಸಿ ಬಳಿದಿದ್ದೀರಿ. ಕಳೆದುಕೊಂಡಿರುವ ಮಾನಕ್ಕೆ ವಾಪಸ್‌ ಪಡೆಯಲು ಏನು ಮಾಡುತ್ತೀರಿ? ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಾ? ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಪೆನ್‌’ಡ್ರೈವ್‌ ಕಳೆದುಕೊಂಡಿಲ್ಲ‌, ನನ್ನ ಬಳಿಯೇ ಸೇಫಾಗಿದೆ, ಆ ಬಗ್ಗೆ ಮಾತನಾಡಿದ ಕೂಡಲೇ ನನ್ನ ಬಳಿ ಓಡಿ ಬಂದ ಸಚಿವರ ಪಟ್ಟಿ ಕೊಡಬೇಕೆ?? ಸಿಎಂ ಸಾಹೇಬರೇ, ‘ಸಿಂಹ ಸಿಂಗಲ್ಲಾಗಿ ಬೇಟೆಯಾಡುತ್ತದೆ ನೆನಪಿರಲಿ ಎಂದು ಅವರು ಹೇಳಿದರು.
ನಿಮಗಿರುವ ಅಧಿಕಾರದ ಅಂಟುರೋಗಕ್ಕೆ ಮದ್ದೇಲ್ಲಿದೆ? ನಿಮ್ಮ ಧನದಾಹಕ್ಕೆ ಚಿಕಿತ್ಸೆ ಪಡೆಯಬಾರದೇ? ಇದು ಮಾರಕ ಮನೋರೋಗವಲ್ಲವೇ? ನನ್ನ ಮಾನಸಿಕ ಸ್ವಾಸ್ಥ್ಯ ಹಾಗಿರಲಿ, ನಾಡಿನ ದೊರೆ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ಜನರ ರಕ್ಷಣೆ ಮಾಡುವವರಾರು? ಹೀಗಾಗಿ ನಿಮಗೆ ತುರ್ತುಚಿಕಿತ್ಸೆ ಅಗತ್ಯವಿದೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!