
ನವದೆಹಲಿ: ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಆಡಳಿತ ಕೇಂದ್ರ ಸರ್ಕಾರ ಕೂಡಾ ಗಿಫ್ಟ್ ನೀಡಲಾರಂಭಿಸಿದೆ.
ಭೂಸೇನೆ, ನೌಕಾಪಡೆ ಹಾಗೂ ವಾಯುಸೇನೆಯ ಮಹಿಳಾ ಯೋಧರಿಗೂ ಇನ್ಮುಂದೆ ಮಹಿಳಾ ಸೇನಾಧಿಕಾರಿಗಳಿಗೆ ಸರಿಸಮನಾಗಿ ಹೆರಿಗೆ, ಶಿಶುಪಾಲನೆ ಮತ್ತು ಶಿಶು ದತ್ತು ಸ್ವೀಕಾರ ರಜೆಗಳನ್ನು ನೀಡಲು ಮುಂದಾಗಿದೆ. ಈ ಕುರಿತು ಮಹಿಳಾ ಸೇನಾಧಿಕಾರಿಗಳಿಗೆ ಇರುವ ನಿಯಮ ಮತ್ತು ಸವಲತ್ತುಗಳನ್ನು ಎಲ್ಲಾ ಶ್ರೇಣಿಯ ಮಹಿಳಾ ಯೋಧರಿಗೂ ವಿಸ್ತರಣೆ ಮಾಡುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥಸಿಂಗ್ ಅನುಮೋದನೆ ನೀಡಿದ್ದಾರೆ.