Wednesday, November 29, 2023
HomePOLITICSಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ!

ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸ್ಥಾನಕ್ಕೆ ಬಿಜೆಪಿ ಘಟಾನುಘಟಿಗಳ ಹೆಸರು ಕೇಳಿ ಬಂದ ನಂತರ ಕೊನೆಯದಾಗಿ ಶೋಭಾ ಕರಂದ್ಲಾಜೆ ಅಧ್ಯಕ್ಷರಾಗುತ್ತಾರೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿಬಂದಿತು. ಅಂತಿಮವಾಗಿ ಅದು ಕೂಡಾ ಠುಸ್ ಪಟಾಕಿ ಆಗಿದೆ. ಇದೀಗ ಯುವಕರನ್ನು ರಾಜ್ಯಾಧ್ಯಕ್ಷರನ್ನಾಗಿಸಬೇಕು ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದ್ದು, ಯುವಮುಖಂಡ ಬಿ ವೈ ವಿಜಯೇಂದ್ರ ಹೆಸರು ಬಲವಾಗಿ ಕೇಳಿಬರುತ್ತಿದೆ.
ಆದರೆ, ಬಿಜೆಪಿಯಲ್ಲಿರುವ ಬಣ ರಾಜಕೀಯ ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ ಬಣ ಒಪ್ಪುವ ಸಾಧ್ಯತೆಗಳು ಕಡಿಮೆ. ಸಂತೋಷ ಬಣದ ಪ್ರಮುಖ ಲೀಡರ್ಗಳಾದ ಮಾಜಿ ಸಚಿವ ಸಿ ಟಿ ರವಿ‌, ಪ್ರಲ್ಹಾದ ಜೋಶಿ ಅವರು ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿಸಲು ಒಪ್ಪುವ ಸಾಧ್ಯತೆಗಳಿಲ್ಲ. ಏಕೆಂದರೆ, ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಲಿಂಗಾಯತರು ಬೇಸರಗೊಂಡು ಕಾಂಗ್ರೆಸ್ ಗೆ ಪರ ವಾಲಿದರು ಎಂಬ ಮಾತನ್ನು ಸಿಟಿ ರವಿ ಅವರು ಇಂದಿಗೂ ಒಪ್ಪುತ್ತಿಲ್ಲ. ಅಲ್ಲಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಆಡುತ್ತಿದ್ದಾರೆ. ಬಿಜೆಪಿ ಯವರು ಹೀಗೆ ಮಾತಾಡ್ತ ಹೊರಟರೆ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಲವಾದ ಏಟು ತಿನ್ನಲು ರೆಡಿಯಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!