ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಗಳ ಹಾವಳಿಗೆ ವೇದಿಕೆ ಸಿದ್ದವಾಗತೊಡಗಿದೆ,

‘ಆಪರೇಷನ್ ಹಸ್ತ, ಆಪರೇಷನ್, ಆಪರೇಷನ್ ದಳಪತಿಗಳು’ ಯಾವುದು ಮೊದಲು ಆರಂಭವಾಗಲಿದೆಯೋ ಎಂಬುದು ಕುತೂಹಲ ಮೂಡಿಸಿದೆ. ಆಪರೇಷನ್ ಗುಮ್ಮ ಮೂರು ಪಕ್ಷದವರಿಗೂ ಕಾಡುತ್ತಿದೆಯಾದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ತಳಮಳ ಉಂಟಾಗಿದೆ.
ಏಕೆಂದರೆ ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ದೀಪಾವಳಿ ಮುಗಿದ ನಂತರ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಆಪರೇಷನ್ ಹಸ್ತದ. ಸುಳಿವು ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಜೆಡಿಎಸ್ಗೆ ಆಪರೇಷನ್ ಹಸ್ತದ ಆತಂಕ ಶುರುವಾಗಿದ್ದು, ತಮ್ಮ ಶಾಸಕರನ್ನ ಕಾಂಗ್ರೆಸ್ ಸೆಳೆಯುವ ಶಂಕೆ ಹಿನ್ನೆಲೆ ಹಾಸನದಲ್ಲಿ ಶಾಸಕರ ಜತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಗೊತ್ತಾಗಿದೆ.