Wednesday, November 29, 2023
HomePOLITICSಗ್ಯಾರಂಟಿಗಳಿಗೆ ಹಣವಿಲ್ಲ, ನೌಕರರಿಗೆ ಸಂಬಳಕ್ಕೆ ಕೊಟ್ಟಿಲ್ಲ: ಸರ್ಕಾರ ಸಂಪೂರ್ಣ ದಿವಾಳಿ!

ಗ್ಯಾರಂಟಿಗಳಿಗೆ ಹಣವಿಲ್ಲ, ನೌಕರರಿಗೆ ಸಂಬಳಕ್ಕೆ ಕೊಟ್ಟಿಲ್ಲ: ಸರ್ಕಾರ ಸಂಪೂರ್ಣ ದಿವಾಳಿ!

ಬೆಂಗಳೂರು: ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿ ಯೋಜನೆ ಜಾರಿಗೆ ಹಣವಿಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಹೀಗಾಗಿ ಸರ್ಕಾರ ದಿವಾಳಿ ಹಂತ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Karnataka, June 19 (ANI): Karnataka Chief Minister BS Yediyurappa holds a meeting for lockdown relaxation, in Bengaluru on Friday. (ANI Photo)

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7ನೇ ವೇತನ ಆಯೋಗದ ಅವಧಿಯನ್ನು ಸರ್ಕಾರ  ಮುಂದೂಡಿರುವುದಕ್ಕೆ ಸಂಬಂಧಿಸಿದಂತೆ ವೇತನ ಪರಿಷ್ಕರಣೆಗೆ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಬೇಕು. ಸರ್ಕಾರ ನೆಪ ಹೇಳಿ ಅವಧಿಯನ್ನು ವಿಸ್ತರಿಸಿದೆ ಕಿಡಿಕಾರಿದರು.
ನೆಪ ಹೇಳಿಕೊಂಡು ಕಾಂಗ್ರೆಸ್ಸಿಗರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ, ನಮ್ಮೆಲ್ಲಾ ಮುಖಂಡರೂಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.
ಜಗತ್ತೇ ಮೆಚ್ಚಿದ ಪ್ರಧಾನಿ ಅವರ ಬಗ್ಗೆ ಟೀಕೆ ಮಾಡುವಷ್ಟು ದುರಹಂಕಾರ ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿದೆ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!