ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆಸ್ಪತ್ರೆ ನಿರ್ಮಾಣ..!

ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆಸ್ಪತ್ರೆ ನಿರ್ಮಾಣ..!

ನವದೆಹಲಿ, ಜೂ.28 : ದಿನೇ ದಿನೇ ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಲ್ಲದೆ, ಕೊರೊನಾದಿಂದ ರಾಷ್ಟ್ರರಾಜಧಾನಿ ನವದೆಹಲಿ ತತ್ತರಿಸಿದ್ದು, ಸೋಂಕಿತರ ಪ್ರಮಾಣ 80 ಸಾವಿರ ಗಡಿ ದಾಟಿದೆ. ದೆಹಲಿಯಲ್ಲಿ ಪ್ರತಿದಿನ ಸುಮಾರು 20-22 ಸಾವಿರ ಮಂದಿಗೆ ಕೊರೊನಾ ಪರೀಕ್ಷೆ ನಡೆಯುತ್ತಿದ್ದು ಪ್ರತಿದಿನ 3-4 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಹಾಗಾಗಿ ಆಸ್ಪತ್ರೆ ಹಾಗೂ ಬೆಡ್ಗಳ ಕೊರತೆ ಎದುರಾಗಿದ್ದು, ಇದನ್ನು ನೀಗಿಸಲು ವಿಶ್ವದ ಅತಿದೊಡ್ಡ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ದಕ್ಷಿಣ ದೆಹಲಿಯ ಛತ್ತರಪುರ್ ನಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕಾಂಪ್ಲೆಕ್ಸ್ನಲ್ಲಿ 10,200 ಬೆಡ್ ಗಳ ಬೃಹತ್ ಕೊರೊನಾ ಆಸ್ಪತ್ರೆಯನ್ನು ಸುಮಾರು ಹತ್ತು ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉಸ್ತುವಾರಿಯಲ್ಲಿ ಐಟಿಬಿಪಿ ಪಡೆಯ ವೈದ್ಯಕೀಯ ಸಿಬ್ಬಂದಿ ಈ ಬೃಹತ್ ಆಸ್ಪತ್ರೆಯನ್ನು ನಿಭಾಯಿಸಲಿದ್ದಾರೆ. 10,200 ಬೆಡ್ ಗಳನ್ನು ಹೊಂದಿರುವ ಈ ಆಸ್ಪತ್ರೆ ಸುಮಾರು ಹದಿನೈದು ಪುಟ್ವಾಲ್ ಸ್ಟೇಡಿಯಂಗಳಿಗೆ ಸಮವಾಗಿದೆ. ಇನ್ನು, 10,200 ಬೆಡ್ ಗಳನ್ನು ಹೊಂದಿರುವ ಈ ಆಸ್ಪತ್ರೆಯನ್ನು 1.10.554 ಚದುರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದ್ದು, ಆಸ್ಪತ್ರೆಯು 44 ನರ್ಸಿಂಗ್ ಕೇಂದ್ರಗಳನ್ನು ಒಳಗೊಂಡಿದೆ. ಇಲ್ಲಿ 800 ಮಂದಿ ಸಾಮಾನ್ಯ, 70 ಮಂದಿ ತಜ್ಞ ವೈದ್ಯರು ಕಾರ್ಯ ನಿರ್ವಹಿಸಲಿದ್ದು, 25 ಮಂದಿ ಆಸ್ಪತ್ರೆ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. 1375 ಮಂದಿ ಸ್ಟಾಪ್ ನರ್ಸ್ ಗಳಿದ್ದು, 20 ಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.