ವಿದೇಶದಿಂದ ಆಗಮಿಸುವ ನಾಗರಿಕರ ಮಾಹಿತಿ ತಕ್ಷಣ ನೀಡಿ : ಪಿ.ಸುನೀಲ್ ಕುಮಾರ್

ವಿದೇಶದಿಂದ ಆಗಮಿಸುವ ನಾಗರಿಕರ ಮಾಹಿತಿ ತಕ್ಷಣ ನೀಡಿ : ಪಿ.ಸುನೀಲ್ ಕುಮಾರ್

ಕೊಪ್ಪಳ : ವಿದೇಶದಿಂದ ನಿಮ್ಮ ಅಕ್ಕ-ಪಕ್ಕದ ಮನೆಗಳಿಗೆ ಹಾಗೂ ಗ್ರಾಮಗಳಿಗೆ ಆಗಮಿಸುವ ನಾಗರಿಕರ ಮಾಹಿತಿಯನ್ನು ತಕ್ಷಣವೇ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕರೋನಾ ವೈರಸ್ ವಿಷಯದಲ್ಲಿ ಕೊಪ್ಪಳದ ನಾಗರಿಕರು ಜಾಗೃತವಾಗಿರುವದು ಹಾಗೂ ಜಿಲ್ಲೆಗೆ ವಿದೇಶದಿಂದ ಆಗಮಿಸುವ ನಾಗರಿಕರ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತೀರುವ ನಾಗರಿಕರಿಗೆ ಮತ್ತು ಮಾಧ್ಯಮದವರಿಗೆ ಹೃತಪೂರ್ವಕವಾದ ಧನ್ಯವಾದಗಳು ಹಾಗೂ ಇನ್ಮುಂದೆ ವಿದೇಶದಿಂದ ಕೊಪ್ಪಳ ಜಿಲ್ಲೆಗೆ ಅಥವಾ ನಿಮ್ಮ ಅಕ್ಕ-ಪಕ್ಕದ ಮನೆಗಳಿಗೆ ಹಾಗೂ ಗ್ರಾಮಗಳಿಗೆ ಆಗಮಿಸುವ ನಾಗರಿಕರ ಮಾಹಿತಿಯನ್ನು ತಕ್ಷಣವೇ ದೂರವಾಣಿ ಸಂಖ್ಯೆ 9449843056, 9731414564 ಗಳಿಗೆ ನೀಡಬೇಕು. ಕರೋನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣಗಳು ಕಂಡುಬಂದಿರುವುದಿಲ್ಲ. ಜಿಲ್ಲಾಡಳಿತವು ಎಲ್ಲಾ ತರಹದ ಅಗತ್ಯ ಮುಂಜಾಗೃತೆಯ ಕ್ರಮಗಳನ್ನು ತೆಗೆದುಕೊಂಡಿದೆ. ಕರೋನಾ ವೈರಸ್ ಬಗ್ಗೆ ಜಾಗೃತರಾಗಿರಬೇಕಾಗಿದ್ದು, ಎಲ್ಲರೂ ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ ಪ್ರಕಟಣೆ ತಿಳಿಸಿದೆ.