ಅ.15 ರಂದು ತುಂಗಭದ್ರಾ ಉದ್ಯಾನವನಗಳು ಬಂದ್

ಅ.15 ರಂದು ತುಂಗಭದ್ರಾ ಉದ್ಯಾನವನಗಳು ಬಂದ್

ಕೊಪ್ಪಳ, ಅ.10 : ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ 16 ರಿಂದ ತುಂಗಭದ್ರಾ ಮಂಡಳಿ ವ್ಯಾಪ್ತಿಯ ತುಂಗಭದ್ರಾ ಡ್ಯಾಂ ಮತ್ತು ಉದ್ಯಾನವನಗಳಿಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿತ್ತು. ಅದರಂತೆ ಅಗಸ್ಟ್ 15 ರಂದು ಹೆಚ್ಚಿನ ಜನರು ಉದ್ಯಾನವನಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆ ದಿನದಂದು ಕೂಡ ಮಂಡಳಿ ವ್ಯಾಪ್ತಿಯ ಉದ್ಯಾನವನಗಳನ್ನು ಮುಚ್ಚುವುದರಿಂದ ಸಾರ್ವಜನಿಕರು ಉದ್ಯಾನವನಗಳಿಗೆ ಭೇಟಿ ನೀಡದೆ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ.ನಾಗಮೋಹನ ಪ್ರಕಟಣೆ ಮೂಲಕ ತಿಳಿಸಿದ್ದಾರೆ.