ಟಿಕ್ ಟಾಕ್ ಸೇರಿ ಚೀನಾದ 59 ಆಪ್ ಬ್ಯಾನ್ ಮಾಡಿದ ಕೇಂದ್ರಸರ್ಕಾರ

ಟಿಕ್ ಟಾಕ್ ಸೇರಿ ಚೀನಾದ 59 ಆಪ್ ಬ್ಯಾನ್ ಮಾಡಿದ ಕೇಂದ್ರಸರ್ಕಾರ

ನವದೆಹಲಿ, ಜೂ.29 : ಟಿಕ್ ಟಾಕ್ ಸೇರಿದಂತೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡುವ ಮೂಲಕ‌ ಮೋದಿ ಸರ್ಕಾರ ಚೀನಾಗೆ ಭಾರೀ ತಿರುಗೇಟು ನೀಡಿದೆ. ದೇಶದ ಭದ್ರತೆ ದೃಷ್ಟಿಯಿಂದ ಹಾಗೂ ಡೇಟಾವನ್ನು ತಿರುಗಿಸುವ ಮತ್ತು ಗೌಪ್ಯತೆ ಸಮಸ್ಯೆಗಳಿರುವ ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದಾಗಿ ಸರ್ಕಾರ ಪ್ರಕಟಿಸಿದೆ. ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ಟಿಕ್‌ಟಾಕ್ ಆಪ್ ವಿಶ್ವದಲ್ಲೆ ಅತಿಹೆಚ್ಚು ಸಂಖ್ಯೆಯ ಬಳಕೆದಾರರನ್ನು ಹೊಂದಿತ್ತು.