ಲಂಕಾ ಅಥವಾ ಯುಎಇಯಲ್ಲಿ ಐಪಿಎಲ್ ನಡೆಸಿ : ಗವಾಸ್ಕರ್ ಸಲಹೆ

ಲಂಕಾ ಅಥವಾ ಯುಎಇಯಲ್ಲಿ ಐಪಿಎಲ್ ನಡೆಸಿ : ಗವಾಸ್ಕರ್ ಸಲಹೆ

ಮುಂಬಯಿ : ಕೋವಿಡ್-19 ಹಿನ್ನೆಲೆಯಲ್ಲಿ ಈ ಸಲದ ಐಪಿಎಲ್‌ ಟೂರ್ನಿಯನ್ನು ಶ್ರೀಲಂಕಾ ಅಥವಾ ಯುಎಇಯಲ್ಲಿ ನಡೆಸಬಹುದು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಇದೇ ಸೆಪ್ಟಂಬರ್‌ ತಿಂಗಳಲ್ಲಿ ಶ್ರೀಲಂಕಾ ಅಥವಾ ಯುಎಇ ಯಲ್ಲಿ ಐಪಿಎಲ್‌ ಟೂರ್ನಿಯನ್ನು ನಡೆಸಲು ಪ್ರಯತ್ನಿಸಬಹುದು. ಆಗ ಭಾರತದಲ್ಲಿ ಮಳೆಗಾಲ ಇರುವುದರಿಂದ ಟೂರ್ನಿ ನಡೆಸಲು ಕಷ್ಟವಾಗಲಿದೆ. ಇನ್ನು, 14 ಪಂದ್ಯಗಳ ಬದಲು ತಂಡವೊಂದು 7 ಪಂದ್ಯಗಳನ್ನಾಡಿದರೆ ಸಾಕು ಎಂಬುದು ಅವರ ಸಲಹೆಯಾಗಿದೆ.