ಸೀಳು ಮೊಟ್ಟೆಗಳ ಬಳಕೆ ಸಾಂಕ್ರಮಿಕ ರೋಗಕ್ಕೆ ಆಹ್ವಾನ : ಅಲಕನಂದಾ ಮಳಗಿ

ಸೀಳು ಮೊಟ್ಟೆಗಳ ಬಳಕೆ ಸಾಂಕ್ರಮಿಕ ರೋಗಕ್ಕೆ ಆಹ್ವಾನ : ಅಲಕನಂದಾ ಮಳಗಿ

ಕೊಪ್ಪಳ : ತಾಲೂಕಿನ ಗಿಣಿಗೇರಾ ಸಮೀಪದ ಕೋಳಿ ಫಾರಂಗಳಿಗೆ ಇತ್ತೀಚೆಗೆ (ಮಾ.19ರಂದು) ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಇಲಾಖೆಯ ಅಂಕಿತ ಅಧಿಕಾರಿಗಳಾದ ಡಾ.ಅಲಕನಂದಾ ಡಿ. ಮಳಗಿ ಅವರು ಹಾಗೂ ಸಿಬ್ಬಂದಿ ವರ್ಗದವರು ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಸೀಳಿದ ಮೊಟ್ಟೆಗಳ ಬಳಕೆ ಮಾಡುವುದರಿಂದ ಹಾಗೂ ಅದನ್ನು ಆಹಾರವಾಗಿ ಸೇವಿಸುವುದರಿಂದ ಸಾಂಕ್ರಮಿಕ ರೋಗಕ್ಕೆ ಆಹ್ವಾನ ಮಾಡಿದಂತಹ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ದಿನಾಂಕ ಮೀರಿದ ಮೊಟ್ಟೆಗಳನ್ನು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡದೇ ಮಾನವೀಯ ದೃಷ್ಟಿಯಿಂದ ಅವುಗಳನ್ನು ಹಸಿಕಸಕ್ಕೆ ಎಸೆಯಲು ಖಡಕ್ ಸೂಚನೆ ನೀಡಿದರು. ಗ್ರಾಹಕರು ಯಾರೂ ಸೀಳು ಮೊಟ್ಟೆ ತೆಗೆದುಕೊಳ್ಳಬಾರದು. ಸೀಳುಮೊಟ್ಟೆ ಬಳಸಿ ತಯಾರಿಸಿ ಬೀದಿಬದಿಯ ಆಹಾರವನ್ನು ಸೇವಿಸಬಾರದು. ಮೊಟ್ಟೆ ವ್ಯಾಪರಸ್ಥರು ಸೀಳುಮೊಟ್ಟೆ ಮಾರಾಟ ಮಾಡುವುದು Food Safety and Standards Authority of India (FSSAI) ಆ್ಯಕ್ಟ್ ಪ್ರಕಾರ ಕಾನೂನು ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಕೋಳಿ ಫಾರಂಗಳ ಮಾಲೀಕರು ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದರು.