ವೈದ್ಯಕೀಯ ಸಚಿವರ ತಂದೆಗೆ ಕೊರೊನಾ ದೃಢ..!

ವೈದ್ಯಕೀಯ ಸಚಿವರ ತಂದೆಗೆ ಕೊರೊನಾ ದೃಢ..!

ಬೆಂಗಳೂರು, ಜೂ.22 : ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅವರ ತಂದೆಗೆ ಸೋಮವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು. ಈ ಕುರಿತು ಸ್ವತಃ ಸಚಿವ ಸುಧಾಕರ್ ಅವರೇ ತಮ್ಮ ತಂದೆಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಟ್ವಿಟ್ ಮಾಡಿದ್ದಾರೆ. ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಆರೈಕೆ ಇರಲಿ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.