ಪ್ಯಾಂಟಿನೊಳಗೆ ಹಾವು, ರಾತ್ರಿಯಿಡಿ ನಿದ್ದೆ ಮಾಡದ ಯುವಕ..! ಮುಂದೆನಾಯ್ತು ನೀವೇ ಓದಿ

ಪ್ಯಾಂಟಿನೊಳಗೆ ಹಾವು, ರಾತ್ರಿಯಿಡಿ ನಿದ್ದೆ ಮಾಡದ ಯುವಕ..! ಮುಂದೆನಾಯ್ತು ನೀವೇ ಓದಿ

ಲಖನೌ, ಜು.29 : ಯುವಕನೊಬ್ಬನ ಪ್ಯಾಂಟಿನೊಳಗೆ ಹಾವು ಸೇರಿಕೊಂಡ ಪರಿಣಾಮ, ಯುವಕ ನರಕ ಯಾತನೆಯನ್ನು ಅನುಭವಿಸಿದ್ದು, ರಾತ್ರಿಯಿಡಿ ಸ್ವಲ್ಪವೂ ಕದಲದೇ ಏಳು ಗಂಟೆಗಳ ಕಾಲ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಸಿಕಂದರ್ ಪುರ್ ಗ್ರಾಮದಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿ ಕೆಲಸ ನಡೆಯುತ್ತಿತ್ತು. ಲವ್ಲೇಶ್ ಎಂಬ ವ್ಯಕ್ತಿ ಕೆಲಸ ಮಾಡಿದ ನಂತರ ಸಹ ಕಾರ್ಮಿಕರೊಂದಿಗೆ ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ಮಲಗಿಕೊಂಡಿದ್ದ. ಗಾಢ ನಿದ್ರೆಯಲ್ಲಿದ್ದಾಗ ಅನಿರೀಕ್ಷಿತವಾಗಿ ಹಾವೊಂದು ಆತನ ಪ್ಯಾಂಟಿನೊಳಗೆ ಸೇರಿಕೊಂಡಿದೆ. ಕೂಡಲೇ ಏನೊ ಪ್ಯಾಂಟಿನೊಳಗೆ ತೂರಿದೆ ಎಂದು ಎಚ್ಚರಗೊಂಡು ನೋಡಿದಾಗ ಹಾವು ಕಾಣಿಸಿದ್ದರಿಂದ ಭಯಗೊಂಡ ಯುವಕ ಸ್ವಲ್ಪವೂ ಕದಲದೆ ಕಂಬವೊಂದನ್ನು ಆಸರೆಯಾಗಿ ಹಿಡಿದುಕೊಂಡು ರಾತ್ರಿಯಿಡೀ ನಿಂತುಕೊಂಡೆ ಸಂಕಷ್ಟ ಅನುಭವಿಸಿದ್ದಾನೆ. ವಿಷಯ ತಿಳಿದು ಸ್ಥಳೀಯರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಾವನ್ನು ಹೊರೆಗೆ ತೆಗೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ಕರೆಸಿಲಾಗಿತ್ತು. ಆದರೆ, ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡ ಪ್ರಮಾದ ತಪ್ಪಿದಂತಾಗಿದೆ.