ಜನರಿಗೆ ಮಾನಸಿಕ ಧೈರ್ಯ ತುಂಬಬೇಕು : ವಿ.ಸೋಮಣ್ಣ

ಜನರಿಗೆ ಮಾನಸಿಕ ಧೈರ್ಯ ತುಂಬಬೇಕು : ವಿ.ಸೋಮಣ್ಣ

ಬೆಂಗಳೂರು, ಜು.28 : ಕೋವಿಡ್-19 ರೋಗದ ಕುರಿತು ಸಾಮಾನ್ಯ ಜನರು ಹೆದರಿಕೊಂಡಿದ್ದಾರೆ. ಅವರಿಗೆ ನಾವು ಮಾನಸಿಕವಾಗಿ ಧೈರ್ಯ ತುಂಬಬೇಕು ಎಂದು ಪೂರ್ವ ವಲಯದ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು. ಮಂಗಳವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಶು ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಿಸಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು, ಹಾಗೂ ಯಾರು ಸಹ ಭಯ ಪಡಬಾರದು ಕೋವಿಡ್-19 ರ ವಿರುದ್ಧ ಧೈರ್ಯವಾಗಿ ಹೋರಾಡಬೇಕು ಎಂದರು. ಕೋವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು 60 ಹಾಸಿಗೆಗಳ ವ್ಯವಸ್ಥೆ ಇದ್ದು, ಇದರ ಎ ಬ್ಲಾಕ್ ನಲ್ಲಿ 30 ಹಾಸಿಗೆ ಸೋಂಕಿತ ಮಹಿಳೆಯರಿಗೆ ಮತ್ತು ವೈದ್ಯರ ಚಿಕಿತ್ಸೆಗೆ ಮತ್ತು ಬಿ ಬ್ಲಾಕ್ ನಲ್ಲಿ 30 ಹಾಸಿಗೆಯನ್ನು ಪುರಷರಿಗೆ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರಾತಿ ಸುರೇಶ್, ಮಾಜಿ ಮಂತ್ರಿಯಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಕುಮಾರ್ ಮೀನಾ ಮತ್ತು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಹೆಬ್ಬಾಳ ಕ್ಷೇತ್ರದ ವೈದ್ಯಧಿಕಾರಿಯಾದ ಡಾ.ವೇದಾಮೂರ್ತಿ ಸಹ ಇದ್ದರು.