ನವ ವೃಂದಾವನ ಗಡ್ಡಿಗೆ ತಾತ್ಕಾಲಿಕ ಸೇತುವೆ ನಿರ್ಮಾಣ

ನವ ವೃಂದಾವನ ಗಡ್ಡಿಗೆ ತಾತ್ಕಾಲಿಕ ಸೇತುವೆ ನಿರ್ಮಾಣ

ಗಂಗಾವತಿ : ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಸಮೀಪದ ನವ ವೃಂದಾವನ ಗಡ್ಡೆಗೆ ಭಕ್ತರು ಸುಲಭವಾಗಿ ತಲುಪಲು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಗಡ್ಡಿಯಲ್ಲಿ ಮೂರು ದಿನಗಳ ಕಾಲ ನಡೆಯುವ ವ್ಯಾಸರಾಜ ತೀರ್ಥರ ಆರಾಧನಾ ಮಹೋತ್ಸವದ ಪ್ರಯುಕ್ತ ಹೊಸಪೇಟೆ ತಾಲ್ಲೂಕಿನ ವೆಂಕಟಾಪುರ ಸಿಮೇಯ ದಡದ ಮಧ್ಯೆ ತುಂಗಭದ್ರಾ ನದಿಗೆ ಈ ತಾತ್ಕಾಲಿಕ ಪ್ಲಾಸ್ಟಿಕ್ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ವ್ಯಾಸರಾಜ ತೀರ್ಥರ ಆರಾಧನಾ ಮಹೋತ್ಸವಕ್ಕೆ ಹೊಸಪೇಟೆ ಕಡೆಯಿಂದ ಬರುವ ಭಕ್ತರಿಗೆ ಹಾಗೂ ವಿವಿಧ ಮಠಾಧೀಶರಿಗೆ ಅನುಕೂಲವಾಗಿದೆ. ಸುಮಾರು 150 ಮೀಟರ್ ಉದ್ದ ಈ ಪ್ಲಾಸ್ಟಿಕ್ ಸೇತುವೆ ಹಗ್ಗದಿಂದ ಭದ್ರವಾಗಿ ಕಟ್ಟಲಾಗಿದ್ದು, ಯಾವುದೇ ರೀತಿಯ ಅಪಾಯ ನಡೆಯದಂತೆ ನಿರ್ಮಿಸಲಾಗಿದೆ. ಇನ್ನು, ಈ ಸೇತುವೆಯನ್ನು ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿಯೊಂದು ನಿರ್ಮಾಣ ಮಾಡಿದೆ ಎನ್ನಲಾಗಿದೆ.