ಕಂದಾಯ ಇಲಾಖೆಯ ನೌಕರರನ್ನು ವಿಮೆ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯ

ಕಂದಾಯ ಇಲಾಖೆಯ ನೌಕರರನ್ನು ವಿಮೆ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯ

ಗಂಗಾವತಿ: ಕೋವಿಡ್ 19 ತಟೆಗಟ್ಟವ ಕೆಲಸದಲ್ಲಿ ನಿರತರಾಗಿರುವ ಕಂದಾಯ ಇಲಾಖೆಯ ನೌಕರರನ್ನು ವಿಮೆ ವ್ಯಾಪ್ತಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಕಂದಾಯ ಇಲಾಖೆಯ ನೌಕರರ ಸಂಘ ಹಾಗೂ ಗ್ರಾಮಲೆಕ್ಕಿಗರ ಸಂಘ ತಾಲೂಕ ಘಟಕದಿಂದ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು. ಕೋವಿಡ್ 19 ತಟೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಆದೇಶಗಳನ್ನು ನೀಡಿದ್ದು, ಇದರಲ್ಲಿ ಕಂದಾಯ ಇಲಾಖೆಯ ಬಹಳ ಮಹತ್ವ ಪೂರ್ಣವಾಗಿ ಕೆಲಸ ನಿರ್ವಹಿಸುತ್ತಿದೆ. ಸಿಬ್ಬಂದಿಗಳಿಗೆ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಕೋರೊನಾ ರೋಗಿಗಳನ್ನು ಗುರುತಿಸಿ ಕ್ವಾರಟೈನ್ ಮಾಡಿಸಿ ಅವರಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಗಡಿಭಾಗದಲ್ಲಿ ವಲಸಿಗರನ್ನು ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸತ್ತಿರುವ ಸಿಬ್ಬಂದಿಗಳಿಗಾದ ಪೋಲಿಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಹೋಂಗಾರ್ಡ್, ಪೌರಕಾರ್ಮಿಕರು ಕೆಲಸದ ವೇಳೆ ಮೃತಪಟ್ಟವರಿಗೆ 30 ಲಕ್ಷ ವಿಮೆ ಸೌಲಭ್ಯ ನೀಡಿದೆ. ಕೋರೋನಾ 19 ತುರ್ತು ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂಧಿಗಳು ಸಹ ಕೆಲಸ ನಿರ್ವಹಿಸುತ್ತಿದ್ದಾರೆ ಇವರನ್ನು ನಂಬಿ ಕುಟುಂಬ ವರ್ಗದವರು ಬದುಕುತ್ತಿದ್ದಾರೆ. ಕೂಡಲೇ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂಧಿಗಳಿಗೆ ವಿಮೆ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪ ತಹಶಿಲ್ದಾರ ಪ್ರಕಾಶ್ ನಾಯಕ್ , ಮೈಬೂಬಲಿ, ರಾಜು ಪಿರಂಗಿ, ಬಾಲಚಂದ್ರ, ಶಿರಸ್ತೇದಾರರಾದ ಶರಣಪ್ಪ, ಮಂಜುನಾಥ್ , ನಂದನ, ಕಂದಾಯ ನಿರೀಕ್ಷಕರಾದ ಮಂಜುನಾಥ್ ಹಿರೇಮಠ ಗಂಗಾವತಿ , ಸುರೇಶ್ ಕಾರಟಗಿ , ಬಸವರಾಜ್ ಕನಕಗಿರಿ, ಗುರುರಾಜ್ ನೂಲ್ವಿ, ಕಂದಾಯ ಇಲಾಖೆ ನೌಕರರು ಉಪಸ್ಥಿತರಿದ್ದರು.