ಜೂ.29 ಕ್ಕೆ ತಮಿಳು ನಟನೊಂದಿಗೆ ಕೆಜಿಎಫ್ ಬೆಡಗಿಯ ನಿಶ್ಚಿತಾರ್ಥ..! ಇಲ್ಲಿದೆ ಆಮಂತ್ರಣ ಪತ್ರಿಕೆ

ಜೂ.29 ಕ್ಕೆ ತಮಿಳು ನಟನೊಂದಿಗೆ ಕೆಜಿಎಫ್ ಬೆಡಗಿಯ ನಿಶ್ಚಿತಾರ್ಥ..! ಇಲ್ಲಿದೆ ಆಮಂತ್ರಣ ಪತ್ರಿಕೆ

ಬೆಂಗಳೂರು, ಜೂ.26 : ಚೊಚ್ಚಲ ಸಿನಿಮಾ ಕೆಜಿಎಫ್ ನ ಮೂಲಕ ಎಲ್ಲರ ಗಮನ ಸೆಳೆದ ಮಂಗಳೂರಿನ ನಟಿ ಶ್ರೀನಿಧಿ ಶೆಟ್ಟಿ ಸದ್ಯದಲ್ಲೇ ತಮಿಳು ನಟನೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ..! ಹೌದು, ಇದು ಅಚ್ಚರಿ ಎನಿಸಿದರೂ ನಿಜ, ಏಕೆಂದರೆ, ಸ್ವತ ಶ್ರೀನಿಧಿ ಶೆಟ್ಟಿಯವರೇ ಸೋಶಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಇದು ರಿಯಲ್ ಅಲ್ಲ, ರೀಲ್ ನಲ್ಲಿ ಮಾತ್ರ. ತಮಿಳಿನ ಕೋಬ್ರಾ ಚಿತ್ರದಲ್ಲಿ ನಟಿಸುತ್ತಿರುವ ಶ್ರೀನಿಧಿ ಶೆಟ್ಟಿ ತಮಿಳು ನಟ ಚಿಯಾನ್ ವಿಕ್ರಂಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆ ಚಿತ್ರ ತಂಡ ಚಿತ್ರದ ಹಾಡೊಂದನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದು, ದಿನಾಂಕವನ್ನು ನಿಗದಿ ಮಾಡಿದೆ. ಹಾಗಾಗಿ ಆ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹಾಡಿನ ಬಿಡುಗಡೆಗೆಂದೇ ಈ ವಿಶೇಷ ಆಮಂತ್ರಣ ಪತ್ರಿಕೆಯನ್ನು ರಿಲೀಸ್ ಮಾಡಿದೆ. ಅಜಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋಬ್ರಾ ಚಿತ್ರದ 'ತುಂಬಿ ತುಳ್ಳಾಲ್' ಸಾಹಿತ್ಯದ ಗೀತೆಗೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದು, ಜೂ.29 ರ ಸೋಮವಾರ ಸಂಜೆ 5 ಗಂಟೆಗೆ ಸೋನಿ ಮ್ಯೂಸಿಕ್ನಲ್ಲಿ ಬಿಡುಗಡೆ ಆಗಲಿದೆ.