ಟಿ-20 ವಿಶ್ವಕಪ್‌ ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ

ಟಿ-20 ವಿಶ್ವಕಪ್‌ ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ

ಸಿಡ್ನಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ತಂಡವನ್ನು 17 ರನ್‌ ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸಿಡ್ನಿ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಆದರೆ, ಭಾರತದ ಸುಲಭ ಟಾರ್ಗೆಟ್‌ ನ್ನು ಬೆನ್ನತ್ತಿದ್ದ ಆಸೀಸ್‌ ಪಡೆ ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ‌ ಇನ್ನೂ ಒಂದು ಎಸೆತ ಬಾಕಿ ಇರುವಾಗ 115 ರನ್ ಗೆ ಆಲ್ ಔಟ್ ಆಗಿದೆ. ಭಾರತದ ಪರ ಪೂನಂ ಯಾದವ್ ನಾಲ್ಕು ವಿಕೆಟ್ ಕಬಳಿಸಿದರೆ, ಶಿಖಾ ಪಾಂಡೆ ಮೂರು ವಿಕೆಟ್ ಪಡೆದರು. ಭಾರತ 17 ರನ್ ಅಂತರದಿಂದ ಜಯ ಸಾಧಿಸಿತು.