ಹಾವೇರಿಯಲ್ಲಿ ಇಬ್ಬರು ಶಂಕಿತರಿಗಿಲ್ಲ ಕೊರೋನಾ

ಹಾವೇರಿಯಲ್ಲಿ ಇಬ್ಬರು ಶಂಕಿತರಿಗಿಲ್ಲ ಕೊರೋನಾ

ಹಾವೇರಿ : ಹಾವೇರಿಯಲ್ಲಿ ಇಬ್ಬರಿಗೆ ಶಂಕಿತ ಕೊರೋನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆ ವೈದ್ಯರು ತಪಾಸಣೆ ನಡೆಸಿದ್ದು, ಅವರಿಗೆ ಕೊರೋನಾ ಇಲ್ಲ ಎಂಬುದನ್ನು ರಕ್ತಪರೀಕ್ಷೆ ಮಾಡುವ ಮೂಲಕ ದೃಢಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಇಬ್ಬರು ರೋಗಿಗಳದ್ದು ನೆಗಟಿವ್ ಬಂದಿದ್ದು, ಹಾವೇರಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ 60 ವರ್ಷದ ವೃದ್ಧ ಹಾಗೂ ಮೂರು ವರ್ಷದ ಮೊಮ್ಮಗನಲ್ಲಿ ಶಂಕಿತ ಕೊರೋನಾ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆ ತಾತಾ, ಆತನ ಪತ್ನಿ ಹಾಗೂ ಮೊಮ್ಮಗನಿಗೆ ಹಾವೇರಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಫಿಜಿಷಿಯನ್ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಮೂವರು ಫೆಬ್ರವರಿ 16 ರಿಂದ ಮಾರ್ಚ್ 03 ವರೆಗೆ ಹಜ್ ಪ್ರವಾಸ ಕೈಗೊಂಡಿದ್ದರು. ವಿಮಾನದ ಮೂಲಕ ಮುಂಬಯಿ, ಹುಬ್ಬಳ್ಳಿಗೆ ಬಂದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ನಿನ್ನೆ ಮೂವರಲ್ಲಿ ಇಬ್ಬರಿಗೆ, ತಾತ, ಮೊಮ್ಮನಿಗೆ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಇದೀಗ ತಾತ, ಮೊಮ್ಮಗನ ರಕ್ತ ಮಾದರಿ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದ್ದು, ವರದಿಯಲ್ಲಿ ನೆಗಟಿವ್ ಬಂದಿದೆ.