ಭಯೋತ್ಪಾದಕರ ಭೀತಿ : ಗಡಿಯಲ್ಲಿ ಹೆಚ್ಚಿದ ಭದ್ರತೆ

ಭಯೋತ್ಪಾದಕರ ಭೀತಿ : ಗಡಿಯಲ್ಲಿ ಹೆಚ್ಚಿದ ಭದ್ರತೆ

ನವದೆಹಲಿ, ಜೂ.29 : ಭಾರತ-ಚೀನಾ ಗಡಿ ಸಂಘರ್ಷ ಬೆನ್ನಲ್ಲೇ ಇದೀಗ ಭಾರತಕ್ಕೆ ಮತ್ತೊಂದು ಭೀತಿ ಎದುರಾಗಿದ್ದು, ದೇಶದೊಳಗೆ ದುಷ್ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಭಾರತದ ಗಡಿಯಲ್ಲಿ ಭಾರೀ ಬಿಗಿ ಭದ್ರತೆಯನ್ನು ಹೆಚ್ಚಿಸುವ ಮೂಲಕ ಭದ್ರತಾ ಪಡೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ಪಾಕಿಸ್ತಾನದ ಐಎಸ್ಐ, ತಾಲಿಬಾನ್ ಮತ್ತು ಜೈಶ್ ಭಯೋತ್ಪಾದಕರ ಸಹಾಯದಿಂದ ಉಗ್ರರು ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದು, ಅವರ ಗುರಿ ದೆಹಲಿ ಮತ್ತು ಪ್ರಮುಖ ರಾಜಕೀಯ ವ್ಯಕ್ತಿಗಳು ಆಗಿರಬಹುದು ಎಂದು ಊಹಿಸಲಾಗಿದೆ. ಹಾಗಾಗಿ ಭಾರತೀಯ ಸೇನೆಯು ಕಾಶ್ಮೀರ ಮತ್ತು ನೇಪಾಳ ಗಡಿ ಭಾಗಗಳಲ್ಲಿ ಹೆಚ್ಚು ಭದ್ರತೆಯನ್ನು ನಿಯೋಜನೆ ಮಾಡುವ ಮೂಲಕ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದೆ.