ಕ್ರಿಕೆಟ್ ದೇವರ ದಾಖಲೆಗೆ ಇಂದು 13 ವರ್ಷ..!

ಕ್ರಿಕೆಟ್ ದೇವರ ದಾಖಲೆಗೆ ಇಂದು 13 ವರ್ಷ..!

ಮುಂಬಯಿ, ಜೂ.29 : ಏಕದಿನ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ದಾಖಲೆಯೊಂದಕ್ಕೆ ಇಂದಿಗೆ ಬರೋಬ್ಬರಿ 13 ವರ್ಷಗಳು ತುಂಬಿವೆ. ಹೌದು, ಏಕದಿನ ಕ್ರಿಕೆಟ್ ನಲ್ಲಿ ಸಚಿನ್ 15 ಸಾವಿರ ರನ್ ಪೂರೈಸಿ ಇಂದಿಗೆ 13 ವರ್ಷಗಳಾಗಿವೆ. 2007 ಜೂನ್ 29 ರಂದು ಸೌತ್ ಆಫ್ರೀಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ಈ ದಾಖಲೆಯನ್ನು ನಿರ್ಮಿಸಿದ್ದರು. ಅಂದಿನ ಪಂದ್ಯದಲ್ಲಿ ಸಚಿನ್ 93 ರನ್ ಗಳಿಸಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ 15 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಸಚಿನ್ ಪಾತ್ರರಾಗಿದ್ದಾರೆ.