ಕೋವಿಡ್ ನಿಂದ ಬಿಗ್ ಬಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೋವಿಡ್ ನಿಂದ ಬಿಗ್ ಬಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಮುಂಬೈ, ಅ.02 : ಬಾಲಿವುಡ್ ನ ಬಿಗ್ ಬಿ, ನಟ ಅಮಿತಾಬ್ ಬಚ್ಚನ್ ಕೋವಿಡ್ ನಿಂದ ಭಾನುವಾರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಮನೆಗೆ ತೆರಳಿದ್ದಾರೆ. ಕಳೆದ 20 ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿ ಮುಂಬೈನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಬ್ ಬಚ್ಚನ್ ಇದೀಗ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಮತ್ತೊಮ್ಮೆ ತಪಾಸಣೆ ಮಾಡಿದಾಗ ವರದಿ ನೆಗಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.