ಕೊರೋನಾ ತಡೆಗೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯೋಗ

ಕೊರೋನಾ ತಡೆಗೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯೋಗ

ರಾಯಚೂರು : ಮಹಾಮಾರಿ ಕೋರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇಲ್ಲಿನ ನಗರಸಭೆ ಜನರಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಿರಾಣಿ, ತರಕಾರಿ, ಔಷಧಿ ಅಂಗಡಿಗಳ ಮುಂದೆ ಕನಿಷ್ಠ ಮೂರು ಅಡಿಗಳ ಅಂತರದಲ್ಲಿ ನಿಂತು ಜನರು ಅವಶ್ಯಕ ಸಾಮಗ್ರಿ ಖರೀದಿಸಲು ನಗರಸಭೆ ಅಧಿಕಾರಿಗಳು ಗುರುತು ಹಾಕಿದ್ದಾರೆ. ಅಂಗಡಿಗಳ ಮುಂದೆ ಜನರು ಗುಂಪು ಗುಂಪಾಗಿ ಬರುವುದರಿಂದ ಸೋಂಕು ಹರಡುವ ಸಾಧ್ಯತೆಯಿಂದ ಇಂತಹ ಕ್ರಮಕ್ಕೆ ಮುಂದಾಗಿದೆ. ನಗರಸಭೆಯಿಂದ ನಗರದ ಕಿರಾಣಿ ಮತ್ತು ಔಷಧಿ ಅಂಗಡಿಗಳ ಮುಂದೆ ಗುರುತುಗಳನ್ನು ಹಾಕಿಸಲಾಯಿತು. ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ತೀವ್ರ ಹರಡುವ ಕಾರಣ ಜನರು ಒಬ್ಬರಿಂದ ಒಬ್ಬರು ದೂರು ನಿಂತು ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ಜನರು ಕಿರಾಣಿ ಮತ್ತು ಔಷಧಿ ಅಂಗಡಿಗಳಿಗೆ ಹೋದಾಗ ಈ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ದೊಡ್ಡಮನಿ ತಿಳಿಸಿದ್ದಾರೆ.