ಕರೋನಾ ಬಗ್ಗೆ ತ್ರೀವನಿಗಾ ವಹಿಸಿ : ನೆಹರು ಓಲೇಕಾರ

ಕರೋನಾ ಬಗ್ಗೆ ತ್ರೀವನಿಗಾ ವಹಿಸಿ : ನೆಹರು ಓಲೇಕಾರ

ಹಾವೇರಿ : ರಾಜ್ಯಾದ್ಯಂತ ಕರೋನಾ ವೈರಸ್‌ ಭೀತಿ ಹಿನ್ನೆಲೆ, ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ ಶನಿವಾರ ಸುದ್ದಿಗೋಷ್ಠಿ ನಡೆಸಿ ಅಧಿಕಾರಿಗಳಿಗೆ ಕರೋನಾ ಸೋಂಕಿನ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದರು. ಕರೋನಾ ವೈರಸ್ ಕುರಿತು ನಿರ್ಲಕ್ಷ್ಯ ಬೇಡಾ. ತಕ್ಷಣವೇ ‌ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ಮುಂಜಾಗ್ರತ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇನ್ನು ಜಿಲ್ಲೆಯಲ್ಲಿ 10 ಜನ ಹೊರದೇಶದಿಂದ ಬಂದಿದ್ದಾರೆ. ಐದು‌ ಜನ ದುಬೈ, ಬೆಹರಾನ್, ಜಪಾನ್, ಮಲೇಶಿಯಾ, ನೇಪಾಳದಿಂದ ಬಂದಿದ್ದಾರೆ‌. ಅವರೆಲ್ಲರಿಗೂ ತಪಾಸಣೆ ಮಾಡಲಾಗಿದೆ. ಹೊರದೇಶದಿಂದ ಬಂದವರಿಗೆಲ್ಲಾ ಮನೆಯಲಿರುವಂತೆ ಸೂಚನೆ ನೀಡಲಾಗಿದೆ. ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ ಎಂದರು. ಇನ್ನೂ ಸದ್ಯ ಸಂಘಟಿತರಾಗಿ ಸೇರುವುದು, ಜಾತ್ರೆ, ಮದುವೆ, ಸಮಾರಂಭ ಮಾಡುವುದು ಬಿಡಬೇಕು. ಇವುಗಳನ್ನು ತಡೆ ಹಿಡಿಯಲು ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ಯಾವುದೇ ಸೊಂಕಿತರು, ಶಂಕಿತ ರೋಗಿಗಳು ಕಂಡು ಬಂದಿಲ್ಲಾ. ಮುಜಾಗ್ರತವಾಗಿ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್, ಮಾತ್ರೆ ಎಲ್ಲ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.