ಚಿಕ್ಕಬಳ್ಳಾಪುರದಲ್ಲಿ ಒಟ್ಟು 4 ಕೊರೊನಾ ಪಾಸಿಟಿವ್

ಚಿಕ್ಕಬಳ್ಳಾಪುರದಲ್ಲಿ ಒಟ್ಟು 4 ಕೊರೊನಾ ಪಾಸಿಟಿವ್

ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿ ನಿಯಂತ್ರಣ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಗೆ ಫೆಬ್ರವರಿಯಿಂದ ಮಾರ್ಚ್ 26 ರವರೆಗೆ ವಿದೇಶಗಳಿಂದ 195 ಜನರು ಬಂದಿದ್ದು, ಇವರ ಜೊತೆ 44 ಜನ ಸಂಪರ್ಕಿಗಳು ಇದ್ದು, ಒಟ್ಟು 239 ಜನ ಅವಲೋಕನದಲ್ಲಿ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರು ಗೃಹ ನಿರ್ಬಂಧನ ದಲಿದ್ದು, ದಿನ ಕ್ಷೇತ್ರ ಆರೋಗ್ಯ ಸಿಬ್ಬಂದಿಗಳು ಇವರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದಾರೆ. 160 ಜನ 14 ದಿನಗಳೊಳಗಿನ ಕ್ವಾರೈಂಟೈನ್ ತಪಾಸಣೆ ಪಡೆಯುತ್ತಿರುತ್ತಾರೆ. 73 ಜನರು 14 ದಿನಗಳ ಕ್ವಾರೈಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ಇನ್ನುಳಿದ ಜನರಿಗೆ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4 ಪಾಸಿಟಿವ್ ವರದಿಯಾಗಿದ್ದು, ಮೂವರು ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಓರ್ವ ಮಹಿಳೆ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ.