ಅಕ್ರಮ ಗಡಿ ನುಸುಳಲು ಯತ್ನಿಸಿದ ಐವರು ಉಗ್ರರು ಮಟ್ಯಾಷ್

ಅಕ್ರಮ ಗಡಿ ನುಸುಳಲು ಯತ್ನಿಸಿದ ಐವರು ಉಗ್ರರು ಮಟ್ಯಾಷ್

ನವದೆಹಲಿ, ಜೂ.30 : ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಐವರು ಉಗ್ರರನ್ನು ಅನಂತ್ನಾಗ್ ಪೊಲೀಸರು ಹಾಗೂ ಭದ್ರತಾ ಪಡೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಮೂವರು ಉಗ್ರರ ಬಗ್ಗೆ ಮೊದಲೇ ಮಾಹಿತಿ ಇತ್ತು. ಅವರಲ್ಲಿ ಒಬ್ಬರು ಜೆಕೆಐಎಫ್ನ ಕಮಾಂಡರ್ ಮತ್ತೊಬ್ಬ ಉಗ್ರ ಜಹೀದ್ ದಾರ್ ಭಾರತದ ಗಡಿಯೊಳಗೆ ನುಸುಳಲು ಯಶಸ್ವಿಯಾಗಿದ್ದರು. ಜಮ್ಮು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರೆದು ಉಗ್ರರನ್ನು ಹೊಡೆದುರುಳಿಸಿದ್ದಾರೆ.