ಆಗಸದಲ್ಲಿ ಮೂಡಿದ ದಾಖಲೆಯ 709 ಕಿ.ಮೀ ಉದ್ದದ ಮಿಂಚು..!

ಆಗಸದಲ್ಲಿ ಮೂಡಿದ ದಾಖಲೆಯ 709 ಕಿ.ಮೀ ಉದ್ದದ ಮಿಂಚು..!

ಬ್ರೆಜಿಲ್, ಜೂ.28 : 2018 ರ ಅಕ್ಟೋಬರ್ 31 ರಂದು ಬ್ರೆಜಿಲ್ ನ ಆಗಸದಲ್ಲಿ ಕಾಣಿಸಿಕೊಂಡ ಮಿಂಚೊಂದು ಇದೀಗ ವಿಶ್ವ ದಾಖಲೆಯ ಪಟ್ಟಿಗೆ ಸೇರಿದೆ. ಬರೋಬ್ಬರಿ 709 ಕಿ.ಮೀ ಉದ್ದ ಈ ಮಿಂಚು ಸ್ಪೋಟಿಸಿದ್ದು, ಅದೀಗ ದಾಖಲೆಗಳಲ್ಲಿರುವ ಅತ್ಯಂತ ಉದ್ದವಾದ ಮಿಂಚು ಎಂದು ವಿಶ್ವ ಸಂಸ್ಥೆಯ ಹವಾಮಾನ ಏಜೆನ್ಸಿ ಘೋಷಿಸಿದೆ.

ಅಲ್ಲದೆ, ಇದೇ ರೀತಿ, ಉತ್ತರ ಅರ್ಜೆಂಟಿನಾದ ಆಗಸದಲ್ಲಿ ಮೂಡಿದ ಮಿಂಚೊಂದು 16.73 ಸೆಕೆಂಡ್ಗಳ ಕಾಲ ಕಾಣಿಸಿಕೊಂಡಿದ್ದು, ಅದೂ ಸಹ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ. 2019 ರ ಮಾರ್ಚ್.4 ರಂದು ಕಾಣಿಸಿಕೊಂಡ ಈ ಮಿಂಚು, ಅತ್ಯಂತ ಸುದೀರ್ಘಾವಧಿಗೆ ಕಾಣಸಿಕ್ಕ ಮಿಂಚು ಎಂದು ತಿಳಿದುಬಂದಿದೆ. ಈ ಹೊಸ ದಾಖಲೆಗಳನ್ನು ಉಪಗ್ರಹ ಆಧಾರಿತ ತಂತ್ರಜ್ಞಾನವೊಂದರಿಂದ ಸೆರೆ ಹಿಡಿಯಲಾಗಿದೆ.