ಆರೋಗ್ಯ ಜಾಗೃತಿ ವಸ್ತುಪ್ರದರ್ಶನ

ಆರೋಗ್ಯ ಜಾಗೃತಿ ವಸ್ತುಪ್ರದರ್ಶನ

ಗಂಗಾವತಿ : ನಗರದ ಆರೋನ್ ಮಿರಜಕರ್ ಶಾಲೆಯಲ್ಲಿ ಗುರುವಾರ ಸಾರ್ವಜನಿಕರ ಆರೋಗ್ಯ ಜಾಗೃತಿ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯ ಪಾಶ್ಚಿಮಾತ್ಯ ಆಹಾರ ಶೈಲಿಗೆ ಒಗ್ಗಿಕೊಂಡಿದ್ದು, ಇದರಿಂದ ತರಕಾರಿ, ಹಣ್ಣು ಹಂಪಲುಗಳ ಮಹತ್ವವನ್ನೇ ಮರೆತ್ತಿದ್ದಾನೆ. ಆ ಬಗ್ಗೆ ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲೇ ಮಾಹಿತಿ ನೀಡುವ ಮೂಲಕ ಆರೋನ್ ಮಿರಜಕರ್ ಶಾಲೆ ಉತ್ತಮ ಕಾರ್ಯ ಮಾಡಿದೆ ಎಂದು ಹೇಳಿದರು. ನಂತರ ವೈದ್ಯ ಡಾ.ಸತೀಶ ರಾಯ್ಕರ್ ಮಾತನಾಡಿ, ಆರೋಗ್ಯಪೂರ್ಣ ಜೀವನ ನಡೆಸಲು ಉತ್ತಮ ಆಹಾರ ಸೇವನೆ ಮಾಡಬೇಕು. ತರಕಾರಿ, ಹಣ್ಣು ಹಂಪಲುಗಳನ್ನು ತಿನ್ನುವುದರಿಂದ ಸದೃಢರಾಗಿ ಇರುವುದಲ್ಲದೇ, ಮಾನಸಿಕವಾಗಿ ಫಿಟ್ ಆಗಿರುತ್ತವೆ. ಆದ ಕಾರಣ ಫಾಸ್ಟ್ ಫುಡ್ ಗಳ ಮೊರೆಹೋಗದೆ ಪ್ರತಿನಿತ್ಯ ಹಸಿರು ತರಕಾರಿ, ಹಣ್ಣುಹಂಪಲುಗಳನ್ನು ಸೇವಿಸಿ ಎಂದು ಹೇಳಿದರು. ವಸ್ತುಪ್ರದರ್ಶನದಲ್ಲಿ ವಿವಿಧ ತರಕಾರಿ, ಹಣ್ಣು ಹಂಪಲುಗಳನ್ನು, ಡ್ರೈಪ್ರೂಟ್ಸ್, ಸೊಪ್ಪುಗಳ ಬಗ್ಗೆ ಮಕ್ಕಳಿಂದ ಮಾಹಿತಿಯನ್ನು ಕೊಡಿಸಲಾಯಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಚಿನ್ನಮ್ಮ ಮಿರಜ್ಕರ್, ಆಡಳಿತಾಧಿಕಾರಿ ಚಂದ್ರಕಾಂತ ರಾವ್, ಮುಖ್ಯಗುರುಗಳಾದ ಜೋಸ್ಲಿನ್ ಎ.ಆರ್, ಸಂಸ್ಥೆಯ ಕಾರ್ಯದರ್ಶಿ ರುಬೆನ್ ಮಿರಜಕರ್ ಹಾಗೂ ಇತರರು ಇದ್ದರು.