ಸರಳ, ಸಾಂಕೇತಿಕವಾಗಿ ಜರುಗಿದ ವಿಶ್ವಕರ್ಮ ಜಯಂತಿ

ಸರಳ, ಸಾಂಕೇತಿಕವಾಗಿ ಜರುಗಿದ ವಿಶ್ವಕರ್ಮ ಜಯಂತಿ

ಮೈಸೂರು, ಸೆ.17 : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸುವ ಮೂಲಕ ಗುರುವಾರ ಕರ್ನಾಟಕ ಕಲಾಮಂದಿರದ ಮನೆಯಂಗಳದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೆಗೌಡ, ಎಲ್.ನಾಗೇಂದ್ರ, ಅಪರ ಜಿಲ್ಲಾಧಿಕಾರಿಗಳಾದ ಬಿ.ಎಸ್.ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ವಿಶ್ವಕರ್ಮ ಸಮಿತಿಯ ಆಧ್ಯಕ್ಷರಾದ ಶಾಂತಮ್ಮ ಮತ್ತು ಹುಯಿಲಾಳು ಕುಮಾರ್, ಸಮಿತಿಯ ಸದಸ್ಯರುಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.