ಐಪಿಎಲ್ ವೇಳಾಪಟ್ಟಿ ಪ್ರಕಟ, ಸೆ.19 ರಿಂದ ಟೂರ್ನಿ ಶುರು

ಐಪಿಎಲ್ ವೇಳಾಪಟ್ಟಿ ಪ್ರಕಟ, ಸೆ.19 ರಿಂದ ಟೂರ್ನಿ ಶುರು

ದುಬೈ, ಸೆ.06 : ಅಂತೂ, ಇಂತೂ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ಇದೇ ತಿಂಗಳು ಸೆಪ್ಟಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು, ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ.

ಇದೇ ತಿಂಗಳು 19 ರಂದು ಅಬುಧಾಬಿಯಲ್ಲಿ ಐಪಿಎಲ್ ಟೂರ್ನಿಯು ಉದ್ಘಾಟನೆಯಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಫ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸೆ.19 ರಿಂದ ನವೆಂಬರ್ 3 ರ ತನಕ ಟೂರ್ನಿ ನಡೆಯಲಿದ್ದು, ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿದ್ದು, ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ.